ಬೆಂಗಳೂರು, ಜನವರಿ 22, 2019 (www.justkannada.in): ಟಿ-ಟ್ವೆಂಟಿ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಟೀಮ್ ಇಂಡಿಯಾ ನ್ಯೂಜಿಲೆಂಡ್ ತಲುಪಿದೆ.
ಕಿವೀಸ್ ನಾಡಿಗೆ ಕಾಲಿಡುತ್ತಿದ್ದಂತೆ, ಕೊಹ್ಲಿ ಬಾಯ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಆಕ್ಲೆಂಡ್ನಲ್ಲಿ ರುಚಿಕರ ಭೋಜನ ಸೇವಿಸಿದ ಟೀಮ್ ಇಂಡಿಯಾ ಆಟಗಾರರು, ನಂತರ ಜಿಮ್ನಲ್ಲಿ ವರ್ಕ್ಔಟ್ ಮಾಡಿ ಕಾಲ ಕಳೆದಿದ್ದಾರೆ.
ಕೊಹ್ಲಿ ತಂಡದ ಇತರೆ ಆಟಗಾರರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಬ್ಯೂಸಿಯಾಗಿದ್ರು. ಮತ್ತೊಂದೆಡೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್, ಆಕ್ಲೆಂಡ್ನ ಸುಂದರ ತಾಣಗಳಿಗೆ ಭೇಟಿ ನೀಡಿ ರಿಲ್ಯಾಕ್ಸ್ ಆಗಿದ್ದಾರೆ.