ನವದೆಹಲಿ, ಜುಲೈ 30, 2019 (www.justkannada.in):ವಿಶ್ವಕಪ್ ನ ಸೆಮಿಫೈನಲ್ಸ್ ನಲ್ಲಿ ಭಾರತ ಸೋತ ನಂತರವೂ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಲ್ಲಿ ಮುಂದುವರೆಸಿರುವುದನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
ಮಿಡ್-ಡೇ ಗೆ ಬರೆದಿರುವ ಅಂಕಣದಲ್ಲಿ ಸುನಿಲ್ ಗವಾಸ್ಕರ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ನೇಮಕಗೊಂಡಿದ್ದು ವಿಶ್ವಕಪ್ ವರೆಗೆ ಮಾತ್ರ. ಆ ನಂತರ ಅವರನ್ನು ಮುಂದುವರೆಸುವುದರ ಬಗ್ಗೆ ಸಣ್ಣ ಸಭೆ ನಡೆಯಬೇಕಿತ್ತು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸಭೆಯೇ ನಡೆಯದೇ ವಿರಾಟ್ ಕೊಹ್ಲಿಯನ್ನು ನಾಯಕನ ಸ್ಥಾನಕ್ಕೆ ಮರು ನೇಮಕ ಮಾಡಿರುವುದು, ವಿರಾಟ್ ಕೊಹ್ಲಿ ಅಥವಾ ಆಯ್ಕೆ ಸಮಿತಿಯ ಸಂತೋಷಕ್ಕಾಗಿ ತಂಡದ ನಾಯಕನನ್ನು ಆಯ್ಕೆ ಮಾಡಿದಂತಿದೆ ಎಂದು ಗವಾಸ್ಕರ್ ತೀಕ್ಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.