ಚಾಮರಾಜನಗರ,ಡಿ,28,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್.ಆರ್.ಸಿ ವಿರೋಧಿಸಿ ಕೊಳ್ಳೇಗಾಲದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಕೊಳ್ಳೇಗಾಲದ ಎಂ.ಜಿ.ಎಸ್.ವಿ. ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಧರಣಿಯಲ್ಲಿ ಸುಮಾರು 2ಸಾವಿರ ಮಂದಿ ಮುಸ್ಲೀಂ ಸಮುದಾಯದವರು ಪಾಲ್ಗೊಂಡಿದ್ದಾರೆ. ಪ್ರತಿಭಟನೆಗೂ ಮುನ್ನಾ ರಾಷ್ಟ್ರಗೀತೆ ಹಾಡಿದ ಪ್ರತಿಭಟನಾಕಾರರು ಸಿಎಎ ವಿರೋಧಿಸಿ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಾವು ಭಾರತೀಯರು, ಸಂವಿಧಾನವೇ ಶಕ್ತಿ. ದೇಶದಲ್ಲಿ ಸಂವಿಧಾನ ವಿರೋಧಿ ಕೇಂದ್ರ ಸರ್ಕಾರ ಇದೆ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತೀಯ ವಿಷ ಬೀಜ ಬಿತ್ತುತ್ತಿದೆ. ಭಾರತ ಶಾಂತೀಯ ರಾಷ್ಟ್ರ ಶಾಂತಿ ಕದಡಲು ನಾವು ಬಿಡೊಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ದೇಶದಲ್ಲಿ ಹಿಂದೂ ಮುಸ್ಲೀಂರು ಭಾರತದಲ್ಲಿ ಅನ್ಯೂನ್ಯವಾಗಿದ್ದೇವೆ. ಪೌರತ್ವ ಹಾಗೂ ಎನ್.ಆರ್. ಸಿ ಮೂಲಕ ಭಾರತೀಯರನ್ನು ಹೊಡೆದು ಆಳುವ ನೀತಿ ಅನುಸರಿಸುತ್ತಿದೆ. ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್.ಆರ್.ಸಿ. ಕಾಯಿದೆ ರದ್ದು ಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
Key words: kollegal-Protest -against -Citizenship Amendment Act- NRC