ಕನ್ನಡಿಗರ ಹೆಮ್ಮೆ : ‘ ಜಾಣಸುದ್ದಿ’ ಜಾಗತಿಕ ವಿಜ್ಞಾನ ಲೋಕವನ್ನು ಪ್ರವೇಶಿಸಿ ಸುದ್ದಿ ಮಾಡಿದೆ.

 

ಮೈಸೂರು, ಜೂ.12, 2019 : (www.justkannada.in news) : ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಯಾದ ‘ ನೇಚರ್ ‘ ನಲ್ಲಿ ಕನ್ನಡದ ವಿಜ್ಞಾನ ಲೇಖನ ಹಾಗೂ ವಿವರಣೆಯನ್ನೊಳಗೊಂಡ `ಜಾಣಸುದ್ಧಿ ‘ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ವಿಶೇಷ ಲೇಖಣ ಪ್ರಕಟಿಸಲಾಗಿದೆ.

ಮೈಸೂರಿನ ಸಿಎಫ್ ಟಿಆರ್ ಐ ನ ಹಿರಿಯ ವಿಜ್ಞಾನಿ ಕೊಳ್ಳೇಗಾಲ ಶರ್ಮ ಅವರ ಕನಸಿನ ಕೂಸು ಜಾಣಸುದ್ಧಿ. ಕನ್ನಡದಲ್ಲಿ ವಿಜ್ಞಾನ ವಿವರಣೆಗಳನ್ನು ಒಳಗೊಂಡ ಆಡಿಯೋ ಸಂದೇಶವನ್ನು ವಾಟ್ಸ್ ಅಪ್ ಗ್ರೂಪ್ ಮೂಲಕ ಪ್ರತಿ ವಾರ ಬಿತ್ತರಿಸಲಾಗುತ್ತಿದೆ. 2017 ರ ಸೆಪ್ಟೆಂಬರ್ ನಲ್ಲಿ ಆರಂಭಗೊಂಡ ಈ ಜಾಣಸುದ್ಧಿಗೆ ಕೇಳುಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡು ಶರ್ಮಾ ಅವರ ಪ್ರಯತ್ನಕ್ಕೆ ಸಾಥ್ ನೀಡಿದರು.

ಇದೀಗ ಸ್ಥಳೀಯ ಭಾಷೆಯಲ್ಲಿ ಅಂದ್ರೆ ಇಂಗ್ಲಿಷ್ ಹೊರತು ಪಡಿಸಿ ಇತರೆ ಪ್ರಾಂತೀಯ ಭಾಷೆಗಳಲ್ಲಿ ವಿಜ್ಞಾನವನ್ನು ಬೋಧಿಸುವುದು ಆ ಮೂಲಕ ಆಸಕ್ತಿ ಮೂಡಿಸುವ ಪ್ರಯತ್ನಕ್ಕೆ ನೇಚರ್ ಮೆಚ್ಚುಗೆ ವ್ಯಕ್ತಪಡಿಸಿದೆ. ಕನ್ನಡದಲ್ಲಿ ಕಾರ್ಯಕ್ರಮ ನಡೆಸುತ್ತಿರುವ ಬಗೆಗೆ ಲೇಖನ ಪ್ರಕಟಿಸುವ ಮೂಲಕ ವಿಜ್ಞಾನ ಲೇಖಕ, ವಿಜ್ಞಾನಿ ಕೊಳ್ಳೇಗಾಲ ಶರ್ಮಾ ಅವರ ಬೆನ್ನು ತಟ್ಟಿದೆ.

ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಸಿಎಫ್ ಟಿಆರ್ ಐ ವಿಜ್ಞಾನಿ ಕೊಳ್ಳೇಗಾಲ ಶರ್ಮಾ, ಜಾಣಸುದ್ಧಿ ಈ ತನಕ 92 ವಾರಗಳ ನಿರಂತರ ಪ್ರಸಾರ ಕಂಡಿದೆ. ಇದು ವಾಟ್ಸ್ ಅಪ್ ಮೂಲಕ ನೇರವಾಗಿ 1 ಸಾವಿರ ಮಂದಿ ಕೇಳುಗರನ್ನು ತಲುಪತ್ತದೆ. ಜತೆಗೆ 2 ಕಮ್ಯೂನಿಟಿ ರೇಡಿಯೋ ಮೂಲಕವೂ ಬಿತ್ತರವಾಗುತ್ತದೆ. ನಮ್ಮ ಈ ಪ್ರಯತ್ನದ ಬಗ್ಗೆ ಅಮೇರಿಕಾದಲ್ಲಿರುವ ಕನ್ನಡಿಗರೊಬ್ಬರು ಮಾಹಿತಿ ಪಡೆದು ಅದನ್ನು ಅಲ್ಲಿನ ‘ INDSCICOM ‘ ಗುಂಪಿನ ಗಮನಕ್ಕೆ ತಂದರು. ಅವರಿಂದ ಜಾಣಸುದ್ಧಿ ‘ ನೇಚರ್ ‘ ಪತ್ರಿಕೆಯವರಿಗೆ ತಲುಪಿ ಈ ಬಗ್ಗೆ ವರದಿ ಪ್ರಕಟವಾಗುವಂತಾಯ್ತು ಎಂದರು.

Kollegala Sharma, a zoologist and senior principal scientist at CFTRI has been producing Janasuddi

Indian initiatives aim to break science’s language barrier
Kollegala Sharma, a zoologist and senior principal scientist at the Central Food Technological Research Institute (CSIR) in Mysuru, India, has been producing Janasuddi (jana means both smart and knowledge and suddi means news in Kannada), a weekly science podcast, since September 2017. The 20-minute episodes, which comprise science research, news and interactive sessions that might include audience questions or comments, is in Kannada and is circulated through the WhatsApp platform. Listeners mainly include public high-school teachers — about 1,000, up from the 20 or so when Sharma first launched the programme. It’s also available on public radio.