ವಾಷಿಂಗ್ಟನ್, ಏಪ್ರಿಲ್ ೨೮, ೨೦೨೧ (www.justkannada.in): ಭಾರತದಲ್ಲಿ ಕೋವಿಡ್-೧೯ ಸರ್ವವ್ಯಾಪಿ ಸೋಂಕಿನ ವಿರುದ್ಧ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ (ಅಔಗಿಂಘಿIಓ) ಲಸಿಕೆ ಕೋವಿಡ್-೧೯ರ ಅತ್ಯಂತ ಅಪಾಯಕಾರಿಯಾಗಿರುವ ೬೧೭ ತಳಿಯ ವಿರುದ್ಧ ಸಮರ್ಥವಾಗಿ ಹೋರಾಡುವ ಗುಣಗಳನ್ನು ಹೊಂದಿದೆ ಎಂದು ಅಮೇರಿಕಾದ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹಾಗಾರರಾದ ಡಾ. ಆಂಥೋನಿ ಫಾಕಿ ಅವರು ಅಭಿಪ್ರಾಯಿಸಿದ್ದಾರೆ.
ವಾಷಿಂಗ್ಟನ್ನಲ್ಲಿ ಇಂದು ಕಾನ್ಫರೆನ್ಸ್ ಕಾಲ್ ಮೂಲಕ ವರದಿಗಾರರೊಂದಿಗೆ ಮಾತನಾಡಿದ ಡಾ. ಆಂಥೊನಿ ಫಾಕಿ ಅವರು, “ನಾವು ಕೋವಿಡ್-೧೯ ಹಾಗೂ ವಿವಿಧ ಲಸಿಕೆಗಳ ಕುರಿತು ನಿರಂತರವಾಗಿ ಸಂಶೋಧನೆ ಹಾಗೂ ಮಾಹಿತಿಯನ್ನು ಕಲೆಹಾಕುತ್ತಿದ್ದು, ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡವರ ಅಧ್ಯಯನ ಮಾಡುತ್ತಿದ್ದೇವೆ. ಇದರ ಪ್ರಕಾರ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾ ವೈರಸ್ನ ೬೧೭ ತಳಿಯ ವಿರುದ್ಧ ಸಮರ್ಥವಾಗಿ ಹೋರಾಡುವ ಲಕ್ಷಣಗಳನ್ನು ಹೊಂದಿದೆ. ಹಾಗಾಗಿ, ಪ್ರಸ್ತುತ ಕೊವ್ಯಾಕ್ಸಿನ್ ಕೋವಿಡ್-೧೯ ಸಾಂಕ್ರಾಮಿಕದ ವಿರುದ್ಧ ಅತ್ಯಂತ ಪರಿಣಾಮಕಾರಿಯಾದ ಲಸಿಕೆಯಾಗುವ ಸಾಧ್ಯತೆಗಳನ್ನು ಹೊಂದಿದೆ,” ಎಂದರು.
ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಪಾಲುದಾರಿಕೆಯೊಂದಿಗೆ ಭಾರತದ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಜನವರಿ ೩ರಂದು ತುರ್ತು ಬಳಕೆಗಾಗಿ ಕೊವ್ಯಾಕ್ಸಿನ್ ಲಸಿಕೆಯ ಬಳಕೆಗೆ ಅನುಮತಿ ನೀಡಲಾಗಿತ್ತು. ಅಮೇರಿಕಾದ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕೇಂದ್ರದ ಒಂದು ತಂಡವು ಭಾರತಕ್ಕೆ ಆಗಮಿಸುತ್ತಿದ್ದು, ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯ ಅಭಿವೃದ್ಧಿಗೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಒದಗಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಕೈಜೋಡಿಸಲಿದೆ.
key words: covaccin- developed – India- power -fight -Kovid-1 breed- Dr. Fucky