ದೆಹಲಿ,ಜನವರಿ,03,2021 (www.justkannada.in) : ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ಶಿಫಾರಸು ಮಾಡಲಾಗಿದೆ ಎಂದು ಭಾರತೀಯ ಪ್ರಧಾನ ಔಷಧ ನಿಯಂತ್ರಣ ಇಲಾಖೆ (ಡಿಸಿಜಿಐ) ಅಧ್ಯಕ್ಷ ವಿ.ಜಿ.ಸೋಮಾನಿ ಹೇಳಿದರು.
ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ ಸುದ್ದಿಗೋಷ್ಠಿ ನಡಸಿ ಅವರು ಮಾಹಿತಿ ನೀಡಿದರು.
ಲಸಿಕೆ ಸಂಬಂಧ 2 ಕಂಪನಿಗಳು ದಾಖಲೆಗಳನ್ನು ಸಲ್ಲಿಸಿವೆ. 2ನೇ ಹಾಗೂ 3ನೇ ಹಂತದ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದ್ದು, ತಜ್ಞರ ಸಲಹೆ ಮೇರೆಗೆ ತುರ್ತು ಸಂದರ್ಭದಲ್ಲಿ ಈ ಲಸಿಕೆಯನ್ನು ಬಳಸುವಂತೆ ಸೂಚಿಸಿದೆ.
ಕೃಪೆ ; internetದೇಶದಲ್ಲಿ ಕೊರೋನಾ ವ್ಯಾಕ್ಸಿನ್ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸುರುವ ಕೊವ್ಯಾಕ್ಸಿನ್, ಆಸ್ಟ್ರೆಜೆನಿಕ್, ಆಕ್ಸ್ ಫರ್ಡ್ ವಿವಿಯ ಕೊವಿ ಶೀಲ್ಡ್ ಲಸಿಕೆಗೆ ತುರ್ತು ಬಳಕೆಗೆ ಅನುಮತಿ ನೀಡಿದೆ.
key words : Kovaxin-Kovshield-Green signal-emergency-use-DCGI-President-V.G.Somani …!