ಬೆಂಗಳೂರು,ಜೂ,29,2020(www.justkannada.in): ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಡುವೆ ಕೋವಿಡ್ ವರದಿ ಬಂದ ಬಳಿಕ ಪೇಷಂಟ್ ಗೆ ದೂರವಾಣಿ ಕರೆ ಮಾಡಿದಾಗ ರೋಗಿಗಳು ಬೀದಿಗೆ ಬರುತ್ತಾರೆ. ಹೀಗಾಗಿ ಇದನ್ನ ತಪ್ಪಿಸಲು ಇನ್ಮುಂದೆ ಕೋವಿಡ್ ಟೆಸ್ಟ್ ವರದಿ ರೋಗಿಗಳಿಗೆ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ಕೋವಿಡ್ ನಿಯಂತ್ರಣ ಉಸ್ತುವಾರಿ ಆರ್.ಅಶೋಕ್ ತಿಳಿಸಿದ್ದಾರೆ.,
ಬೆಂಗಳೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ಕೊರೋನಾ ನಿಯಂತ್ರಿಸಲು ಸರ್ಕಾರ ಮುಂದಾಗಿದೆ. 6 ತಿಂಗಳಗಳ ಕಾಲ ಇದೇ ರೀತಿ ಪರಿಸ್ಥಿತಿ ಇರಲಿದೆ. ವೈದ್ಯಕೀಯ ಸಿಬ್ಬಂದಿ ಇದೇ ರೀತಿ 6 ತಿಂಗಳು ಕೆಲಸ ಮಾಡಲು ಸಿದ್ಧರಿರಬೇಕು. ಕೆಲಸ ಮಾಡಲು ಮಾನಸಿಕ ಸಿದ್ಧರಾಗಿರುವಂತೆ ಕೊರೋನಾವಾರಿಯರ್ಸ್ ಗಳಿಗೆ ಮನವಿ ಮಾಡಿದರು.
ಕೋವಿಡ್ ವರದಿ ಬಂದ ಬಳಿಕ ಪೇಷಂಟ್ ಗೆ ದೂರವಾಣಿ ಕರೆ ಮಾಡಿದ ತಕ್ಷಣ ರಸ್ತೆಗೆ ಬಂದು ನಿಲ್ಲುತ್ತಾರೆ ಇದನ್ನ ತಪ್ಪಿಸಲು ಕೋವಿಡ್ ಬಗ್ಗೆ ವರದಿ ನೀಡದಂತೆ ಸೂಚನೆ ನೀಡಲಾಗಿದೆ. ಪೇಷೆಂಟ್ ಗೆ ಯಾವುದೇ ರಿಪೋರ್ಟ್ ನೀಡುವಂತಿಲ್ಲ. ಮೊದಲು ಐಸಿಎಂಆರ್, ಬಿಬಿಎಂಪಿಗೆ ನೀಡಬೇಕು. ನಂತರ ರೋಗಿಯನ್ನ ರವಾನಿಸಲು ನಿರ್ಧರಿಸಲಾಗುತ್ತದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು. ಕೊರೋನಾ ಸೋಂಕು ಲಕ್ಷಣಗಳಿದ್ದರೇ ಆಸ್ಪತ್ರೆಗೆ ಕಳುಸಿತ್ತೇವೆ. ಇಲ್ಲದಿದ್ದರೇ ಕೋವಿಡ್ ಕೇರೆ ಸೆಂಟರ್ ಗೆ ಕಳಿಸುತ್ತೇವೆ ಎಂದು ಮಾಹಿತಿ ನೀಡಿದರು.
Key words: Kovid Test -Report – patients-minister-R. Ashok