ಹಾಸನ,ಆ,17,2019(www.justkannada.in): ರಾಜ್ಯದ ನೆರೆ ಪರಿಸ್ಥಿತಿ ನಿರ್ವಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಹಾಸನದಲ್ಲಿ ಇಂದು ಮಾತನಾಡಿದ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಜನಪ್ರತಿನಿಧಿಗಳು ಆಡಳಿತ ನಡೆಸುತ್ತಿಲ್ಲ. ಸಚಿವರಿಲ್ಲದೇ ಸಿಎಂ ಒಬ್ಬರೇ ನೆರೆ ಪರಿಸ್ಥಿತಿ ನಿರ್ವಹಣೆಗೆ ಪ್ರಯತ್ನ ಪಡುತ್ತಿದ್ದಾರೆ. ಪ್ರಧಾನಿ ಬಳಿ ಸಿಎಂ ಒಬ್ಬರೇ ಹೋದರೇ ಏನು ಕೆಲಸ ಆಗುತ್ತದೆ ಎಂದು ಟೀಕಿಸಿದರು.
ಹಾಗೆಯೇ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿ ವೈಮಾನಿಕ ಸಮೀಕ್ಷೆ ನಡೆಸಬೇಕಿತ್ತು. ಆದರೆ ಅದನ್ನ ಮಾಡಲಿಲ್ಲ. ಪ್ರವಾಹ ನಿರ್ವಹಣ ಸಂಬಂಧ ಸರ್ವ ಪಕ್ಷ ಸಭೆಯನ್ನೂ ಕರೆದಿಲ್ಲ. ಹೀಗಾಗಿ ಪ್ರವಾಹ ಪರಿಸ್ಥಿತಿ ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
Key words: KPCC president -Dinesh Gundurao – central -state government’s -failure -manage Neighborhood situation