ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಬೇಕೆಂಬ ಹೇಳಿಕೆ; ಸಚಿವ ರಾಜಣ್ಣಗೆ ಡಿಕೆ ಸುರೇಶ್ ತಿರುಗೇಟು

ರಾಮನಗರ,ಜೂನ್,29,2024 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಬೇಕೆಂದು ಪರೋಕ್ಷವಾಗಿ ಹೇಳಿಕೆ ನೀಡಿರುವ ಸಹಕಾರ ಸಚಿವ ಕೆ.ಎನ್ ರಾಜಣ್ಣಗೆ ಮಾಜಿ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್, ಡಿಕೆ ಶಿವಕುಮಾರ್ ಗೆ ಜವಾಬ್ದಾರಿ ಕೊಟ್ಟಿರೋದು ಪಕ್ಷದ ವರಿಷ್ಠರು. ಡಿಕೆ ಶಿವಕುಮಾರ್ ವರಿಷ್ಠರ ಮುಂದೆ ಎಲ್ಲವನ್ನ ತಿಳಿಸಿದ್ದಾರೆ. ಇಲ್ಲಿ ಯಾರೂ ಶಾಶ್ವತ ಅಲ್ಲ.  ಯಾವ ಹುದ್ದೆಯೂ ಕೂಡ ಶಾಶ್ವತ ಶಾಶ್ವತ ಅಲ್ಲ ಹೇಳಿಕೆ ಕೊಟ್ಟವರು ಹಿಂದೆ ತಿರುಗಿ ನೋಡಿಕೊಳ್ಳಬೇಕು.  ಹಿಂದೆ ತಿರುಗಿ ತಮ್ಮ ಬೆನ್ನು ನೋಡಿಕೊಳ್ಳಬೇಕು . ಉತ್ತಮ ಆಡಳಿತ ನಡೆಸಲಿ ಎಂದು ಜವಾಬ್ದಾರಿ ಕೊಟ್ಟಿದೆ. ಯೋಗ್ಯದೆ  ಇಲ್ಲ ಅಂದರೆ ಎಲ್ಲರೂ ಚುನಾವಣೆಗೆ ಹೋಗೋದು ವಾಸಿ ಎಂದು ಸಚಿವ ರಾಜಣ್ಣಗೆ ಟಾಂಗ್ ಕೊಟ್ಟರು.

ಡಿಕೆ ಶಿವಕುಮಾರ್  ಸಿಎಂ ಆಗಬೇಕೆಂಬುದು ಸ್ವಾಮೀಜಿಗಳ ಅಭಿಪ್ರಾಯ ಸ್ವಾಮೀಜಿ ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಸಿಎಂ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ.  ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಈಗ ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ ಸಿಎಂ ಸ್ಥಾನ ಖಾಲಿಯಾದಾಗ ಇದು ಚರ್ಚೆಗೆ ಬರುತ್ತೆ ಎಂದರು.

Key words: KPCC, President, DK Shivakumar, DK Suresh, Minister, Rajanna