ಬೆಂಗಳೂರು,ಮೇ,12,2022(www.justkannada.in) : ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಮತ್ತು ಸಚಿವ ಅಶ್ವಥ್ ನಾರಾಯಣ್ ಭೇಟಿ ಕುರಿತು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ನಟಿ, ಮಾಜಿ ಸಂಸದೆ ಟ್ವಿಟ್ ಮಾಡಿ ಅಸಮಾಧಾನ ತೋಡಿಕೊಂಡಿದ್ದರು.
ಇದೀಗ ಮತ್ತೆ ಟ್ವಿಟ್ ವಾರ್ ಮುಂದುವರೆಸಿರುವ ನಟಿ ರಮ್ಯಾ, ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವಂತೆ ಕೆಪಿಸಿಸಿ ಕಚೇರಿಯಿಂದ ಸೂಚನೆ ಹೋಗಿದೆ. ಕಾಂಗ್ರೆಸ್ ಕಚೇರಿಯಿಂದ ನನ್ನನ್ನು ಟ್ರೋಲ್ ಮಾಡುವಂತೆ ಸಂದೇಶವನ್ನು ರವಾನಿಸಲಾಗಿದ್ಯಂತೆ ಎಂದು ಆರೋಪಿಸಿದ್ದಾರೆ.
ನನ್ನನ್ನು ಟ್ರೋಲ್ ಮಾಡುವ ತೊಂದರೆಯನ್ನು ನೀವು ತೆಗೆದುಕೊಳ್ಳಬೇಡಿ ಎಂದು ರಮ್ಯಾ ಹೇಳಿದ್ದಾರೆ. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಟ್ರೋಲ್ ಮಾಡಿರುವ ಸರಣಿ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಳ್ಳುವುದರ ಮೂಲಕ ಕೆಪಿಸಿಸಿ ವಿರುದ್ಧ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ.
ನಟಿ ರಮ್ಯಾ ಸರಣಿ ಟ್ವಿಟ್ ಬಗ್ಗೆ ಡಿ.ಕೆ ಶಿವಕುಮಾರ್ ವ್ಯಂಗ್ಯ..
ನಟಿ ಮಾಜಿ ಸಂಸದೆ ರಮ್ಯಾ ಅವರ ಸರಣಿ ಟ್ವೀಟ್ ಗೆ ಟಾಂಗ್ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಮ್ಯಾ ಏನ್ ಟ್ವೀಟ್ ಮಾಡಿದ್ದಾರೋ ಏನ್ ಮಿಸ್ ಫೈಯರ್ ಆಗಿದೆಯೋ ಗೊತ್ತಿಲ್ಲ. ರಮ್ಯಾ ನಮ್ಮ ಪಕ್ಷದ ಮಾಜಿ ಸಂಸದೆ. ಎಂಬಿ ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು. ಇಬ್ಬರೂ ನಮಗೆ ಬೇಕಾದವರು ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದರು.
ರಮ್ಯಾ ಯಾಕಿಷ್ಟು ರಂಪ ಮಾಡ್ತಿದ್ದಾರೋ ಗೊತ್ತಿಲ್ಲ. ಪಾಪ ಯಾರಿಗೆ ಏನು ನೋವಿದೆಯೋ, ಏನ್ ದುಗಡ ಇದೆಯೋ ಗೊತ್ತಿಲ್ಲ ಎಂದು ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದರು.
ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಮಾಜಿ ಸಚಿವ ಎಂಬಿ ಪಾಟೀಲ್ ಭೇಟಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ರಕ್ಷಣೆಗಾಗಿ ಅಶ್ವತ್ಥ್ ನಾರಾಯಣ್ ಎಂಬಿ ಪಾಟೀಲ್ ಮೊರೆ ಹೋಗಿರುವ ಸಾಧ್ಯತೆ ಇದೆ ಎಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ನಟಿ ರಮ್ಯಾ, ಇದೊಂದು ಸೌಹರ್ದಯುತ ಭೇಟಿ ಆಗಿರಬಹುದು. ಎಂ.ಬಿ ಪಾಟೀಲ್ ಕಟ್ಟಾ ಕಾಂಗ್ರೆಸ್ಸಿಗ. ಡಿ.ಕೆ. ಶಿವಕುಮಾರ್ ಅವರು ಎಂಬಿ ಪಾಟೀಲ್ ಅವರ ಬಗ್ಗೆ ನೀಡಿರುವ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದರು.
key words: kpcc-president-DK Shivakumar- former MP –Ramya- tweet