ಬೆಂಗಳೂರು, ನವೆಂಬರ್, 29,2022(www.justkannada.in): ಭೂಗತ ಪಾತಕಿ ಗರಡಿಯಲ್ಲಿ ಬೆಳೆದ ಡಿಕೆ ಶಿವಕುಮಾರ್ ಈಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಎಂದಿದ್ದ ರಾಜ್ಯ ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ನನ್ನ ಮೇಲೆ ಯಾವುದೇ ರೌಡಿ ಶೀಟರ್ ಕೇಸ್ ಇಲ್ಲ. ಬಿಎಸ್ ಯಡಿಯೂರಪ್ಪನೂ ಜೈಲಿಗೆ ಹೋಗಿ ಬಂದಿದ್ದಾರೆ. ಅಮಿತ್ ಶಾ ಕೂಡ ಜೈಲಿಗೆ ಹೊಗಿ ಬಂದಿದ್ದಾರೆ . ನಾನು ಜೈಲಿಗೆ ಹೋಗಿ ಬಂದಿದ್ದೇನೆ. ನನ್ನನ್ನ ರಾಜಕೀಯ ಪ್ರೇರಿತರಾಗಿ ಜೈಲಿಗೆ ಹಾಕಿದ್ದು.ಭ್ರಷ್ಟಾಚಾರ ಮಾಡಿ ನಾನೇನು ಜೈಲಿಗೆ ಹೋಗಿರಲಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದೆ ಅದನ್ನ ನೋಡಿಕೊಳ್ಳಲಿ ಎಂದು ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.
Key words: kpcc-president-DK Shivakumar-tong-bjp