ಮೈಸೂರು,ಡಿಸೆಂಬರ್,17,2020(www.justkannada.in): ಮೈಸೂರು ಸಂಸದರು ಮಾತೆತ್ತಿದರೆ ಮೈಸೂರಿಗೆ ಎಷ್ಟೋ ಟ್ರೈನ್ ತಂದೆ ಅಂತ ಇದ್ದಾರೆ. ಬೆಂಗಳೂರಿನಲ್ಲಿ ಜಾಗ ಇಲ್ಲದಿರುವುದರಿಂದ ಇಲ್ಲಿಗೆ ಟ್ರೈನ್ ಗಳನ್ನ ಕಳುಹಿಸುತ್ತಿದ್ದಾರೆ. ಪ್ರತಿ ವರ್ಷ ಟ್ರೈನ್ ಗಳನ್ನ ಹೆಚ್ಚಿಸೋದು ಸಾಮಾನ್ಯ. ಆದರೆ ಎಲ್ಲವನ್ನ ನಾನೇ ತಂದೆ ಅಂತ ಹೇಳಿಕೊಳ್ಳುತ್ತೀರಾ. ಇನ್ನೊಂದು ಕಡೆ ನಾನೇ ಏರ್ ಪೋರ್ಟ್ ಕಟ್ಟಿಸಿದ್ದು ಅಂತೀರಾ. ಬಾಯಿ ಬಿಟ್ಟರೆ ಬರೀ ಸುಳ್ಳು ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಎಂ. ಲಕ್ಷ್ಮಣ್, ಅಂತಾರಾಷ್ಟ್ರೀಯ ಏರ್ ಪೋರ್ಟ್ ಮಾಡ್ತಿನಿ ಅಂತ ಹೇಳ್ತಿರಿ. ಮೊದಲು ರನ್ ವೇ ಹೆಚ್ಚಿಸಿ. ಮೈಸೂರಿಗೆ ೧೦ ಲೈನ್ ತಂದೆ ಅಂತೀರಿ ಆ ಜಾಗದಲ್ಲಿ ಇನ್ನೂ ಎರಡು ಎಂಪಿ ಗಳು ಬರ್ತಾರೆ ನಿವೊಬ್ರೆ ತಂದ್ರಾ ಆಗಿದ್ರೆ..? ಆ ಎಂಪಿಗಳ ಪಾತ್ರ ಏನು ಇಲ್ವಾ..? ಈ ಎಲ್ಲಾ ಯೋಜನೆಗಳನ್ನ ಹಿಂದೆ ನಮ್ಮ ನಾಯಕರು ಇವೆಲ್ಲವನ್ನ ತಂದಿದ್ದು ಆದರೆ ನೀವು ಇದನ್ನ ಮುಂದುವರಿಸಿದ್ದಿರಿ ಅಷ್ಟೇ ಎಂದು ಲೇವಡಿ ಮಾಡಿದರು.
ಹಿನಕಲ್ ನಗರಸಭೆ ವ್ಯಾಪ್ತಿಗೆ ಸೇರಿಸುವುದಕ್ಕೆ ವಿರೋಧ: 10ನೇ ಕ್ಲಾಸ್ ಪಾಸಾದವರು 7 ನೇ ಕ್ಲಾಸಿಗೆ ಹೋದಂತೆ
ವಿಜಯನಗರ ಮೂರನೇ ಹಂತವನ್ನು ಹಿನಕಲ್ ನಗರಸಭೆ ವ್ಯಾಪ್ತಿಗೆ ಸೇರಿಸಿದ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಎಂ. ಲಕ್ಷ್ಮಣ್, 10ನೇ ಕ್ಲಾಸ್ ಪಾಸಾದವರು 7 ನೇ ಕ್ಲಾಸಿಗೆ ಹೋದಂತೆ ಎಂದು ಟೀಕಿಸಿದರು. ಮುಡಾ ಅಭಿವೃದ್ಧಿ ಪಡಿಸಿದ ಎಲ್ಲಾ ಬಡಾವಣೆಗಳು ನಗರಪಾಲಿಕೆ ವ್ಯಾಪ್ತಿಯೊಳಗೆ ಬರಬೇಕು. ನಗರಾಭಿವೃದ್ಧಿ ಕಾಯ್ದೆ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುವ ಬಡಾವಣೆಗಳೆಲ್ಲಾ ನಗರಕ್ಕೆ ಸೇರಿರುವುದಾಗಿರುತ್ತವೆ. ಇಂತಹ ಕನಿಷ್ಠ ಜ್ಞಾನವೂ ಇಲ್ಲದೇ ವಿಜಯನಗರ ಬಡಾವಣೆಯನ್ನು ಹಿನಕಲ್ ನಗರಸಭೆಗೆ ಸೇರಿಸಿದ ಕೀರ್ತಿ ನಮ್ಮದು ಎಂದು ಸಂಸದರು ಹಾಗೂ ಉಸ್ತುವಾರಿ ಸಚಿವರು ಹೇಳುತ್ತಾರೆ. ಇದೊಂದು ರೀತಿ 10 ನೇ ತರಗತಿ ಪಾಸಾದವರು ಪಿಯುಸಿಗೆ ಕಳುಹಿಸಿದವರ ಬದಲು 7ನೇ ತರಗತಿ ಕಳಿಸಿದಂತೆ ಎಂದು ಕಿಡಿಕಾರಿದರು.
ಅಲ್ಲಿನ 5500 ನಿವಾಸಿಗಳು ನಗರಾಭಿವೃದ್ಧಿಯಿಂದ ನಿವೇಶನ ಪಡೆಯಲು ಕೆಎಂಸಿ ಆ್ಯಕ್ಟ್ 1976 ನಂತೆ ಎಲ್ಲಾ ರೀತಿಯ ಶುಲ್ಕವನ್ನು ಈಗಾಗಲೇ ಪಾವತಿಸಿದ್ದಾರೆ. ಈ ನಿರ್ಧಾರದಿಂದ ಅಲ್ಲಿನ ನಿವಾಸಿಗಳು ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುವುದು ಶತ ಸಿದ್ಧ . ಅಲ್ಲಿನ ನಿವೇಶನಗಳ ಬೆಲೆ ದಿಡೀರನೆ ಕುಸಿಯುತ್ತದೆ. ಇದರಿಂದ ಕಾವೇರಿ ನೀರಿನ ಸರಬರಾಜಿಗೆ ಹಕ್ಕು ಮಂಡಿಸಲು ಸಾಧ್ಯವಿಲ್ಲ. ಈ ಕುರಿತು ಸಿದ್ದರಾಮಯ್ಯನವರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.
Key words: kpcc spokeperson- M. Laxman- irony- against -Pratap simha