ಮೈಸೂರು,ಮಾರ್ಚ್,23,2021(www.justkannada.in): ಹೂವಿನನಾಯಕನಹಳ್ಳಿ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್. ಪ್ರಕರಣ ಸಂಬಂಧ ಮುಖ್ಯಮಂತ್ರಿ ಮತ್ತು ಕೈಗಾರಿಕಾ ಸಚಿವರ ವಿರುದ್ಧ ಸಲ್ಲಿಸಿದ್ದ ದೂರಿನ ಸಂಬಂಧ ಬಿ ರಿಪೋರ್ಟ್ ಸಲ್ಲಿಸಿದ್ದನ್ನು ಪುನರ್ ಪರಿಶೀಲಿಸಲು ನ್ಯಾಯಾಲಯ ಆದೇಶ ನೀಡಿದೆ. ಹೈಕೋರ್ಟ್ ಆದೇಶದ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್ ನಿರಾಣಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜೀನಾಮೆ ಸಲ್ಲಿಸಿ ನ್ಯಾಯ ಸಮ್ಮತ ತನಿಖೆಗೆ ಸಹಕರಿಸಬೇಕು. ಮುಖ್ಯಮಂತ್ರಿಗಳ ವಿರುದ್ಧ ಈಗಾಗಲೇ ದೋಷಿ ಎಂದು ಚಾರ್ಜ್ ಶೀಟ್ ಸಲ್ಲಿಸಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ತನಿಖೆ ನಡೆದು ಯಡಿಯೂರಪ್ಪ ನಿರ್ದೋಷಿ ಎಂದು ಸಾಬೀತಾದರೆ ಆಗ ಅವರನ್ನು ಮುಖ್ಯಮಂತ್ರಿ ಬದಲು ಪ್ರಧಾನಮಂತ್ರಿಯನ್ನೇ ಮಾಡಲಿ ಎಂದು ಹೇಳಿದರು.
ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ವಿಚಾರ: ಬಿಜೆಪಿ ವಿರುದ್ಧ ಆಕ್ರೋಶ…
ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಂ. ಲಕ್ಷ್ಮಣ್, ಇದು ಸಿದ್ಧರಾಮಯ್ಯ 2015 ರಲ್ಲಿ ಮೈಸೂರಿನಲ್ಲಿ ನಿರ್ಮಾಣ ಮಾಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಇದು ಸಿದ್ದರಾಮಯ್ಯ ಕೊಟ್ಟಿದ್ದ ಯೋಜನೆ. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಫಿಲ್ಮಿಸಿಟಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿ ಮೈಸೂರಿಗರ ಕೆಂಗಣ್ಣುಗೆ ಗುರಿಯಾಗಿದ್ದರು ಎಂದರು.
ಸಿದ್ದರಾಮಯ್ಯ ಕಾಲದಲ್ಲಿ ಹಿಮ್ಮಾವು ಗ್ರಾಮದ 110 ಎಕರೆ ಜಾಗ ಗುರುತಿಸಿ ಕೆಲಸ ಕೂಡ ಆರಂಭ ಆಗಿತ್ತು. ಅದೂ ಸರ್ಕಾರದ ವತಿಯಿಂದಲೇ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಮೈಸೂರಿನಿಂದ ರಾಮನಗರಕ್ಕೆ ನಂತರ ಬೆಂಗಳೂರಿಗೆ ಅಂತ ಹೇಳಿದ್ರು. ಆದರ ಬಿಜೆಪಿ ಸರ್ಕಾರ ಮತ್ತೆ ಬೆಂಗಳೂರಿನಲ್ಲಿ ಜಾಗ ಇಲ್ಲ ಅಂತ ಮೈಸೂರಿನಲ್ಲೇ ಉಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ. ಅದೂ ಖಾಸಗಿ ಸಹಭಾಗಿತ್ವದಲ್ಲಿ ಅಂತ ಹೇಳಿದ್ದಾರೆ. 12 ತಿಂಗಳಿನಿಂದ ಬೆಂಗಳೂರು ಸುತ್ತ ಜಾಗ ಹುಡುಕಿ ಸಾಕಾಗಿ ಎಲ್ಲೂ ಜಾಗ ಸಿಗದೆ ಇದ್ದರಿಂದ ಬೆಂಗಳೂರಿನಲ್ಲಿ ಫಿಲ್ಮಿಸಿಟಿ ನಿರ್ಮಾಣ ಕೈಬಿಟ್ಟಿದ್ದಿವಿ ಅಂತ ಹೇಳಿದ್ದಾರೆ. ನಾವು ಮೈಸೂರಲ್ಲೆ ಮಾಡ್ತೇವೆ ಅಂತ ಎಲ್ಲೂ ಹೇಳಿಲ್ಲ ಎಂದು ಬಿಜೆಪಿ ನಡೆಯನ್ನ ಟೀಕಿಸಿದರು.
ಹಾಗೆಯೇ ಎಸ್ ಟಿ ಸೋಮಶೇಖರ್ , ಪ್ರತಾಪ್ ಸಿಂಹ ನಾವು ತಂದ್ದಿದ್ದು ಅಂತ ಪ್ರಚಾರ ಗಿಟ್ಟಿಸಿಕೊಳ್ಳಿತ್ತಿದ್ದಾರೆ. ಫಿಲ್ಮಂ ಸಿಟಿ ಮೈಸೂರಿನಲ್ಲೆ ಮಾಡ್ತೇವೆ ಅಂತ ಯಡಿಯೂರಪ್ಪ ಬಜೆಟ್ ನಲ್ಲೂ ಘೋಷಣೆ ಮಾಡಿಲ್ಲ. ಹಿಂದೆ ಮೈಸೂರಲ್ಲಿ ನಿರ್ಮಾಣ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ರು. ನಂತರ ರಾಮನಗರಕ್ಕೆ ಶಿಫ್ಟ್ ಮಾಡುವುದು ಕುಮಾರಸ್ವಾಮಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ರು. ಈಗ ಪ್ರಶ್ನೋತ್ತರ ವೇಳೆ ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ಸ್ಥಳ ಇಲ್ಲ ಎಂದು ಹೇಳಿದ್ದಾರೆ ಅಷ್ಟೇ. ಆದರೆ ಯಡಿಯೂರಪ್ಪ ಬಜೆಟ್ ನಲ್ಲಿ ಏನು ಘೋಷಣೆ ಮಾಡಿಲ್ಲ. ಇವರು ಕೊಟ್ಟ ಮಾಹಿತಿ ಆಧಾರ ಮೇಲೆ ಮೈಸೂರಿಗೆ ಬರಬಹುದು ಅಷ್ಟೇ. ಆದೂ ಖಾಸಗಿ ಸಹಭಾಗಿತ್ವ ಅಂತ ಹೇಳಿದ್ದಾರೆ. ಫಿಲ್ಮ ಸಿಟಿ ಖಾಸಿಗಯವರಿಗೆ ಕೊಟ್ರೆ, ಲೋಕಲ್ ಜನಕ್ಕೆ ಅವಕಾಶ ಸೀಗಲ್ಲ. ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುದಾದರೆ ಸರ್ಕಾರದಿಂದಲೇ ನಿರ್ಮಾಣ ಆಗಬೇಕು ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಆಗ್ರಹಿಸಿದರು.
Key words: KPCC spokesperson M.Laxman-CM bs yeddyurappa- resigns