ಮೈಸೂರು,ಮೇ,6,2022(www.justkannada.in): ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಹೆಚ್ಚು ಒಲವು ಇದೆ ಎಂದು ಹೇಳಿಕೆ ನೀಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ಎ ವೆಂಕಟೇಶ್, ಬಿಜೆಪಿ ಮಾತ್ರ ಅಲ್ಲ ಬೇರೆ ಯಾರೇ ಬಂದರೂ ಇಲ್ಲಿ ಅಕೌಂಟ್ ತೆರೆಯಲ್ಲ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ಮತ್ತು ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಸಂವಿಧಾನಾತ್ಮಕ ಹುದ್ದೆಯಲ್ಲಿಲ್ಲ. ಸಂವಿದಾನಾತ್ಮಕ ಹುದ್ದೆಯಲ್ಲಿ ಇಲ್ಲದವರು ಹೇಳಿದಂತೆ ಮುಖ್ಯಮಂತ್ರಿಗಳು ಅಧಿಕಾರ ನಡೆಸುತ್ತಿರುವುದು ದೊಡ್ಡ ದುರಂತ. ಅದನ್ನು ಸಹಿಸಿಕೊಂಡಿರುವ ಬೊಮ್ಮಾಯಿಯವರು ಎಷ್ಟು ಕುಬ್ಜರಾಗಿದ್ದಾರೆ ಎಂಬುದು ಇದರಲ್ಲೇ ಗೊತ್ತಾಗುತ್ತೆ ಎಂದು ಟಾಂಗ್ ನೀಡಿದರು.
ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ನೆ.ಲ ನರೇಂದ್ರ ಬಾಬು ವಿರುದ್ಧ ಆಕ್ರೋಶ
ಇದೇ ವೇಳೆ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ನೆ.ಲ ನರೇಂದ್ರ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ವಕ್ತಾರ ವೆಂಕಟೇಶ್, ನಮ್ಮ ಪಕ್ಷದಿಂದ ನರೇಂದ್ರ ಶಾಸಕರಾಗಿದ್ದವರು. ಈಗ ರಾಜ್ಯ ಹಿಂದುಳಿದ ವರ್ಗಗಳ ಬಿಜೆಪಿ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಅವರಿಗೆ ಹಿಂದುಳಿದ ವರ್ಗಗಳ ನಾಯಕತ್ವದ ಬಗ್ಗೆ ಬಹಳ ಬಲೀಶ ಹೇಳಿಕೆ ನೀಡಿದ್ದಾರೆ. ಜಿಪಂ, ತಾಪಂ ಸ್ಪರ್ದೇ ಮಾಡುವವರಿಗೆ ತರಬೇತಿ ನೀಡ್ತೇವೆ ಅಂತ ಹೇಳಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಬಿಜೆಪಿ ಅವರಿಗೆ ನಂಬಿಕೆ ಇಲ್ಲ.
ಕಳೆದ ವರ್ಷದಿಂದ ಚುನಾವಣೆಯನ್ನೆ ಮಾಡಿಲ್ಲ. ಹಿಂದುಳಿದ ವರ್ಗಗಳ ಪ್ರಚೋದನೆ ಹೇಳಿಕೆ ಅಷ್ಟೆ ಹೇಳುತ್ತಿದ್ದಾರೆ. ಹಿಂದುಳಿದ ವರ್ಗಗಳ ನಾಯಕತ್ವವನ್ನ ಪ್ರಶ್ನೆ ಮಾಡಿದ್ದಾರೆ. ಇವರು ಚಲನಚಿತ್ರ ರಂಗದಲ್ಲಿ ಇದ್ದವರು. ರಾಜಕೀಯ ರಂಗವನ್ನು ಚಲನಚಿತ್ರ ರಂಗ ಅಂದುಕೊಂಡಿದ್ದಾರೆ. ಗ್ರಾಮೀಣ ಭಾಗದ ಜನರ ಬಗ್ಗೆ ಶಕ್ತಿ ಅವರಿಗೆ ಗೊತ್ತಿಲ್ಲ. ಅವರು ಟ್ರೈನ್ ಮಾಡ್ತೇವೆ ಎಂದು ಹೇಳಿ ಅವರ ಆತ್ಮಗೌರವಕ್ಕೆ ದಕ್ಕೆ ತಂದಿದ್ದಾರೆ. ಇವರಿಗೆ ಚುನಾವಣೆ ಎದುರಿಸಲು ಧೈರ್ಯವೇ ಇಲ್ಲ. ತಾಪಂ ಜಿಪಂ ಚುನಾವಣೆ ಎದುರಿಸಲು ಆಗದ ಪಕ್ಷ ಬಿಜೆಪಿ. ಇವತ್ತು ಗ್ರಾಮೀಣ ಭಾಗದ ನಾಯಕತ್ವನ್ನ ಕುಗ್ಗಿಸಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟು ಲಾಂಗ್ ಗ್ಯಾಪ್ ಇವರಲ್ಲಿ . ಕಳೆದ ಲೋಕಸಭೆ ಚುನಾವಣೆಯಲ್ಲಿ ಒಂದು ಟಿಕೇಟ್ ನೀಡಲು ಅವರಿಗೆ ಆಗಿಲ್ಲ. ಕೇವಲ ಮತಗಳಿಸಲು ಹಿಂದುಳಿದ ವರ್ಗಗಳ ಹೆಸರು ಹೇಳ್ತಾ ಇದ್ದಾರೆ. 2023 ಜನ ತಕ್ಕ ಶಾಸ್ತಿ ಮಾಡ್ತಾರೆ.. ಇವತ್ತು, ವಿಧವೆ, ವೃದ್ಧಾಪ್ಯ ವೇತನ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ 6 ಜನರಿಗೆ ಟಿಕೆಟ್ ನೀಡಿದೆ. ಮುಂದೆ ಬಿಜೆಪಿ ಹಿಂದುಳಿದ ವರ್ಗಗದ ಇಬ್ಬರಿಗೆ ಟಿಕೆಟ್ ನೀಡ್ತೇವೆ ಅಂತ ಸುಳ್ಳು ಹೇಳುತ್ತಿದೆ ಎಂದು ಹೆಚ್.ಎ ವೆಂಕಟೇಶ್ ಕಿಡಿಕಾರಿದರು.
ಹಿಂದುಳಿದ ವರ್ಗಗಳ ನಿಗಮಗಳಿಗೆ ಸರಿಯಾದ ಅನುದಾನ ನೀಡಿಲ್ಲ.
ಹಿಂದುಳಿದ ವರ್ಗಗಳ ನಿಗಮಗಳಿಗೆ ಸರಿಯಾದ ಅನುದಾನ ನೀಡಿಲ್ಲ. ಉಪ್ಪಾರ ನಿಗಮಕ್ಕೆ ಒಂದು ರೂ. ನೀಡಿಲ್ಲ. ಶೇ. 60 ಜನಕ್ಕೆ 185 ಕೋಟಿ ಕೊಟ್ಟಿದ್ದೇವೆ ಅಂತ ಹೇಳ್ತಾ ಇದಾರೆ. ಆದರೆ ಬೇರೆ ಸಮುದಾಯಕ್ಕೆ 500-500 ಕೋಟಿ ಕೊಟ್ಟಿದ್ದಾರೆ. ಹಿಂದುಳಿದ ವರ್ಗಗಳ ಜನಸಂಖ್ಯೆ ಅನುಗುಣವಾಗಿ ಅನುದಾನ ನೀಡಬೇಕು ಎಂದು ಹೆಚ್.ಎ ವೆಂಕಟೇಶ್ ಒತ್ತಾಯಿಸಿದರು.
ಪಿಎಸ್ ಐ ಪರೀಕ್ಷಾ ಹಗರಣ ಸಂಬಂಧ ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಎ ವೆಂಕಟೇಶ್, ಒಬ್ಬ ಶಾಸಕನಿಗೆ ನೋಟಿಸ್ ನೀಡಿದ್ದು ಇತಿಹಾಸದಲ್ಲೆ ಇಲ್ಲ. ಪ್ರಿಯಾಂಕ ಖರ್ಗೆ ಮಾತಾಡಿದ್ದಕ್ಕೆ ಪೊಲೀಸ್ ನೋಟೀಸ್ ನೀಡಿ ಹೆದರಿಸುತ್ತಿದ್ದಾರೆ. ಇದು ಬಿಜೆಪಿಗೆ ಶೋಭೆ ತರುವವಂತದ್ದಲ್ಲ. ಪರೀಕ್ಷೆ ಅಕ್ರಮ ನೋಡಿ ಓದುವವರೂ ಹುಮಸ್ಸು ಕಳೆದುಕೊಂಡಿದ್ದಾರೆ. ಇದು ಆಡಳಿದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಬುದ್ದಿವಂತರು ಅಧಿಕಾರಿ ಆದ್ರೆ ವ್ಯವಸ್ಥೆ ಸರಿ ಇರುತ್ತೆ. ಈ ರೀತಿ ಅಕ್ರಮದಿಂದ ಅಧಿಕಾರಿ ಆದ್ರೆ ಹೇಗೆ. ವಿರೋಧ ಪಕ್ಷದಲ್ಲಿ ಇದ್ದವರಿಗೆ ಸೌಜನ್ಯ ವಾಗಿ ನಡೆಸಿಕೊಂಡಿಲ್ಲ. ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೇಳಬೇಕಿತ್ತು. ಗೃಹ ಸಚಿವರು ರಾಜಿನಾಮೆ ನೀಡಬೇಕಿತ್ತು. ಇವೇಲ್ಲ ಬಿಟ್ಟು ಅಕ್ರಮ ಸಪೋರ್ಟ್ ಮಾಡ್ತಾ ಇದಾರೆ ಎಂದು ಕೆಪಿಸಿಸಿ ವಕ್ತಾರ ವೆಂಕಟೇಶ್ ಆರೋಪಿಸಿದರು.
Key words: KPCC-spokperson-HA venkatesh-politics