ಬೆಂಗಳೂರು, ನವೆಂಬರ್ 22, 2019 (www.justkannada.in): ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಸಿಸಿಬಿಯಿಂದ ತನಿಖೆ ಚುರುಕುಗೊಂಡಿದೆ.
ಮೊದಲ ಬಾರಿಗೆ ಸಿಸಿಬಿ ಪೊಲೀಸರು ಅಂಪೈರ್ ವಿಚಾರಣೆ ನಡೆಸಿದ್ದಾರೆ.ಕೆಪಿಎಲ್ನಲ್ಲಿ ಹಲವು ಪಂದ್ಯಗಳ ಅಂಪೈರಿಂಗ್ ಮಾಡಿದ್ದ ಬಿ.ಕೆ.ರವಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಬಿ.ಕೆ.ರವಿ ಪುತ್ರ ಶರತ್, ಕೆಪಿಎಲ್ ತಂಡವೊಂದರಲ್ಲಿ ಆಡುತ್ತಿದ್ದ. ಪುತ್ರ ಆಡಿದ್ದ ಪಂದ್ಯವೊಂದಕ್ಕೆ ರವಿ ಮೂರನೇ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಆ ಪಂದ್ಯದಲ್ಲಿ ಕೂಡ ಮ್ಯಾಚ್ ಫಿಕ್ಸಿಂಗ್ ನಡೆದಿರೋದು ಬೆಳಕಿಗೆ ಬಂದಿದೆ.
ಹೀಗಾಗಿ ಬಿ.ಕೆ.ರವಿ ಅವರನ್ನ ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಬಿ.ಕೆ.ರವಿ ಪುತ್ರ ಶರತ್ನನ್ನು ಕೂಡ ವಿಚಾರಣೆಗೆ ಕರೆಸೋ ಸಾಧ್ಯತೆ ಇದೆ.