ಬೆಂಗಳೂರು, ಸೆಪ್ಟೆಂಬರ್ 23, 2019 (www.justkannada.in): ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಕೇಸ್ ನಲ್ಲಿ ಎರಡು ಕೆಪಿಎಲ್ ಪ್ಯಾಂಚೈಸಿ ಕೋಚ್ಗಳಿಗೆ, ಸಿಸಿಬಿ ನೊಟೀಸ್ ನೀಡಿದೆ.
ಕೆಪಿಎಲ್ನಲ್ಲಿ ಬೇರೆ ಬೇರೆ ತಂಡಗಳಿಗೆ ಬ್ಯಾಟಿಂಗ್ ಕೋಚ್ ಆಗಿರುವ ಇಬ್ಬರಿಗೆ, ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ತನಿಖಾಧಿಕಾರಿ ನೊಟೀಸ್ ನೀಡಿದ್ದಾರೆ.
ಸಿಸಿಬಿಯ ಪ್ರಾಥಮಿಕ ತನಿಖೆಯಲ್ಲಿ ಈ ಕೋಚ್ ಗಳು ಬ್ಯಾಟ್ಸ್ಮನ್ ಗಳನ್ನು ಬುಕ್ಕಿಗಳ ಜೊತೆ ಲಿಂಕ್ ಮಾಡಿಕೊಡುತ್ತಿದ್ದರು ಎನ್ನುವ ಮಾಹಿತಿ ಸಿಕ್ಕಿದ್ದು, ಕೋಚ್ಗಳ ಕಾಲ್ ಡಿಟೇಲ್ಸ್ ಆಧಾರದ ಮೇಲೆ ಪತ್ತೆ ಮಾಡಲಾಗಿದೆ.