KPSC ಗೆಜೆಟೆಡ್ ಪ್ರೊಬೇಷನರ್ಸ್, ಹುದ್ದೆ ಬದಲಾದ ಅಧಿಕಾರಿಗಳನ್ನು ಮುಂದುವರೆಸಲು ಕಾನೂನಿನಲ್ಲಿ ಅವಕಾಶವಿಲ್ಲ : ಮುಖ್ಯಮಂತ್ರಿ

ಬೆಂಗಳೂರು, ಮಾ.23, 2022 : (www.justkannada.in news ): “ಕರ್ನಾಟಕ” ಲೋಕಸೇವಾ ಆಯೋಗವು 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪುನರ್ ಪರಿಷ್ಕತ ಆಯ್ಕೆ ಪಟ್ಟಿಯನ್ನು ಉಚ್ಛ ನ್ಯಾಯಾಲಯದ ನಿರ್ದೇಶನಗಳನ್ವಯ ಪ್ರಕಟಿಸಿರುವುದರಿಂದ, ಇಲಾಖೆ/ಹುದ್ದೆ ಬದಲಾವಣೆಯಾಗಿರುವ ಅಧಿಕಾರಿಗಳನ್ನು ಅಲ್ಲಿಯೇ ಮುಂದುವರೆಸಲು ಕಾನೂನಿನ ಪ್ರಕಾರ ಅವಕಾಶವಿರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಸಭೆ ಸದಸ್ಯ ವೀರಭದ್ರಯ್ಯ (ವೀರಣ್ಣ) ಚರಂತಿಮಠ ಅವರು ನಿಯಮ 73ರ ಅಡಿಯಲ್ಲಿ ಹೇಳಿಕ ನೀಡಿದ್ದರು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಬೊಮ್ಮಾಯಿ ಈ ಸ್ಪಷ್ಟನೆ ನೀಡಿದ್ದಾರೆ.

ವಿಧಾನ ಸಭೆ ಸದಸ್ಯ ವೀರಭದ್ರಯ್ಯ (ವೀರಣ್ಣ) ಚರಂತಿಮಠ ಅವರು ನೀಡಿದ್ದ ಹೇಳಿಕೆ ಹೀಗಿತ್ತು…
“1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ಪ್ರಕ್ರಿಯೆಯು ಮಾನ್ಯ ಉಚ್ಚ ನ್ಯಾಯಾಲಯದ ತೀರ್ಮಾನದನ್ವಯ 2006ರಲ್ಲಿ ಅಂತಿಮವಾಗಿ ಅಭ್ಯರ್ಥಿ ಪ್ರಕಟಿಸಲಾಗಿದ್ದು, ಸದರಿ ಆಯ್ಕೆಪಟ್ಟಿಯನ್ನು 2014ರಲ್ಲಿ ಮತ್ತು 2019ರಲ್ಲಿ ಮರು ಪ್ರಕಟಿಸಿದಾಗ ಹಲವಾರು ಅಭರ್ಥಿಗಳು ಉದಾಹರಣೆಗೆ 15 ವರ್ಷ ಕಂದಾಯ ಇಲಾಖೆಯ ಸೇವೆ ಸಲ್ಲಿಸಿದ ನಂತರ ಈಗ ಮರು ಪ್ರಕಟಣೆಯಂತೆ ಬೇರೆ ಇಲಾಖೆಗೆ ಬದಲಾವಣೆಗೊಂಡಿರುವುದರಿಂದ ಹಾಗೂ ಅವರು ನಿವೃತ್ತಿಯ ಅಂಚಿನಲ್ಲಿರುವ ಸಂದರ್ಭದಲ್ಲಿ ಬೇರೆ ಇಲಾಖೆಯ ಕಾರ್ಯ ವಿಧಾನಗಳನ್ನು ತಿಳಿಯಲು ತರಬೇತಿ ನೀಡುವ ಬದಲಾಗಿ ಅವರುಗಳನ್ನು ಈಗ ಇರುವ ಇಲಾಖೆಯಲ್ಲಿಯೇ ಸೂಪರ್ ನ್ಯೂಮರಿ ಹುದ್ದೆ ಸೃಜಿಸಿ ಮುಂದುವರೆಸುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ.

ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರಿಸಿದ್ದು, ಖಲೀಲ್ ಅಹಮದ್ ಕೆ.ಆರ್‌ ಮತ್ತು ಇತರರು ದಾಖಲಿಸಿರುವ ರಿಟ್ ಅರ್ಜಿ ಸಂಖ್ಯೆ 27674/2012 c/w 41366/2012, 27730/2012, 43718 43720-43732/2012, 4297/2013, 1733/2013ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ: 21,06.2016ರಂದು ತೀರ್ಪನ್ನು ನೀಡಿರುತ್ತದೆ. ಸದರಿ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯವು ದಿನಾಂಕ: 11.04.2018ರಂದು ನೀಡಿರುವ ತೀರ್ಪಿನಲ್ಲಿ ಎತ್ತಿ ಹಿಡಿದಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ದಿನಾಂಕ: 21.06.2016ರ ತೀರ್ಪಿನಲ್ಲಿನ ನಿರ್ದೇಶನಗಳನ್ವಯ ಕರ್ನಾಟಕ ಲೋಕಸೇವಾ ಆಯೋಗವು 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನ್ ಮೂಲ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಿ, ಪರಿಷ್ಕೃತ ಆಯ್ಕೆಪಟ್ಟಿಯನ್ನು ದಿನಾಂಕ: 30.01.2021ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿರುತ್ತದೆ,
“ಕರ್ನಾಟಕ” ಲೋಕಸೇವಾ ಆಯೋಗವು 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷರ್ಸ್ ಪುನರ್ ಪರಿಷ್ಕತ ಆಯ್ಕೆ ಪಟ್ಟಿಯನ್ನು ಉಚ್ಛ ನ್ಯಾಯಾಲಯದ ನಿರ್ದೇಶನಗಳನ್ವಯ ಪ್ರಕಟಿಸಿರುವುದರಿಂದ, ಇಲಾಖೆ/ಹುದ್ದೆ ಬದಲಾವಣೆಯಾಗಿರುವ ಅಧಿಕಾರಿಗಳು ಬದಲಾವಣೆಯಾದ ಇಲಾಖೆ/ಹುದ್ದೆಗಳಲ್ಲಿ ಕಾರ್ಯವರದಿ ಮಾಡಿಕೊಳ್ಳಬೇಕಾಗಿದೆ. ಇಲಾಖೆ/ಹುದ್ದೆ ಬದಲಾವಣೆಯಾಗಿರುವ ಅಧಿಕಾರಿಗಳನ್ನು ಅಲ್ಲಿಯೇ ಮುಂದುವರೆಸಲು ಕಾನೂನಿನ ಪ್ರಕಾರ ಅವಕಾಶವಿರುವುದಿಲ್ಲ.

key words : KPSC-probationers-court-cm-karnataka