ಬೆಂಗಳೂರು,ಆಗಸ್ಟ್,9,2021(www.justkannada.in): ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿಗೆ ಬಂದರೂ ಸಹ ಸಿಎಂ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಎಸ್.ಎ ರಾಮದಾಸ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮತ್ತೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಎಸ್.ಎ ರಾಮದಾಸ್, ಸಿಎಂ ನನ್ನನ್ನ ಕೆಆರ್ ಕ್ಷೇತ್ರಕ್ಕೆ ಸೀಮಿತ ಮಾಡಿದ್ದಾರೆ. ಹೀಗಾಗಿ ಕೆ.ಆರ್ ಕ್ಷೇತ್ರವೇ ನನ್ನ ರಾಜ್ಯ, ನನ್ನ ದೇಶ. ಅದ್ದರಿಂದ ಕೆ.ಆರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಒಬ್ಬ ವ್ಯಕ್ತಿಯ ಕರೆಯಿಂದ ನನಗೆ ಸಚಿವ ಸ್ಥಾನ ಕೈ ತಪ್ಪಿದೆ. ಯಾಕೆ ಈ ರೀತಿ ಮಾಡಿದ್ರಿ ಎಂದು ಅವರನ್ನೂ ಕೂಡ ಕೇಳಿದ್ದೇನೆ. ಆದರೆ ಅವರ ಹೆಸರನ್ನ ಬಹಿರಂಗಪಡಿಸುವುದಿಲ್ಲ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.
ನನಗೆ ದೆಹಲಿಯಿಂದ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕಟೀಲ್ ಅವರು ಪೋನ್ ಮಾಡಿ ತಿಳಿಸಿದ್ರು. ಸೀನಿಯಾರಿಟಿಯಲ್ಲಿ ಮತ್ತು ಅನುಭವದಲ್ಲಿ ಮೊದಲನೇ ಸ್ಥಾನದಲ್ಲಿದ್ದೀರಾ. ಪಕ್ಷದ ಸಂಘಟನೆಯಲ್ಲಿ ಮೊದಲ ಸ್ಥಾನದಲ್ಲಿದ್ದೀರಾ. ಮೈಸೂರಿನಲ್ಲಿ 25ವರ್ಷಗಳಲ್ಲಿ 12 ಶಾಸಕರು ಗೆದ್ದಿದ್ದರು. ಅದರಲ್ಲಿ11 ಜನ ಪಕ್ಷ ಬಿಟ್ಟು ಹೋದ್ರು. ನಾನೊಬ್ಬ ಮಾತ್ರ ಪಕ್ಷದಲ್ಲಿ ಉಳಿದುಕೊಂಡಿದ್ದೆ. ಇದು ಗೊತ್ತಿದ್ದೇ ಅಧ್ಯಕ್ಷರು ಸಚಿವ ಸ್ಥಾನ ಕೊಡಲು ಪಾರ್ಟಿ ನಿರ್ಧಾರ ಮಾಡಿದೆ ಅಂತ ನಳೀನ್ ಕುಮಾರ್ ಕಟೀಲ್ ಹೇಳಿದ್ರು. ನಾನು ಒಬ್ಬ ಸ್ವಯಂ ಸೇವಕ ಹಾಗಾಗಿ ಸಂಘದ ಪಟ್ಟಿಯಲ್ಲೂ ಕೂಡಾ ನನ್ನ ಹೆಸರಿತ್ತು. ನನ್ನ ತಂದೆಯ ಸಮಾನರಾದ ಯಡಿಯೂರಪ್ಪ ಕೂಡ ಕರೆದು ಪಟ್ಟಿಯಲ್ಲಿ ನನ್ನ ಹೆಸರಿದೆ ಒಳ್ಳೆ ಕೆಲಸ ಮಾಡು ಎಂದಿದ್ದರು.
18 ಶಾಸಕರು ಹಾಗೂ ಇಬ್ಬರು ಮಾಜಿ ಮಂತ್ರಿಗಳ ಮುಂದೆ ರಾಮದಾಸ್ ಗೆ ಎಲ್ಲಾ ರೀತಿಯ ಅನುಭವ ಇದೆ ಅಂತ ಹೇಳಿದ್ರು. 15 ದಿನ ಟ್ರೈನಿಂಗ್ ಪಡೆದುಕೊಳ್ಳಿ ಅಂತ ಹೇಳಿದ್ದರು. ಯಾರ ಒಬ್ಬರ ಫೋನ್ ಕಾಲ್ ನಿಂದ ದೆಹಲಿಯಲ್ಲಿ ನನ್ನ ಸಚಿವ ಸ್ಥಾನ ಕೈತಪ್ಪಿದೆ ಅಂತ ಗೊತ್ತು. ಎರಡೇ ಗಂಟೆಗಳಲ್ಲಿ ಆ ವ್ಯಕ್ತಿಗೆ ಫೋನ್ ಮಾಡಿ ಯಾಕೆ ಈ ರೀತಿ ಮಾಡಿದ್ರಿ ಅಂತ ಕೇಳಿದ್ದೀನಿ. ಮಂತ್ರಿ ಮಾಡಿದ್ರೆ ಇಡೀ ರಾಜ್ಯ ಓಡಾಡ್ತಿದೆ, ಜಿಲ್ಲಾ ಮಂತ್ರಿ ಮಾಡಿದ್ರೆ ಜಿಲ್ಲೆ ಪೂರಾ ಓಡಾಡ್ತಿದ್ದೆ, ಈಗ ಕೆ.ಆರ್.ಕ್ಷೇತ್ರದಲ್ಲಿ ಮಾಡಿದ್ದಾರೆ. ಹಾಗಾಗಿ ಕೆ.ಆರ್.ಕ್ಷೇತ್ರದಲ್ಲಿ ಓಡಾಡುತ್ತಿದ್ದೀನಿ ಎಂದು ಶಾಸಕ ರಾಮದಾಸ್ ಅಸಮಾಧಾನ ತೋರ್ಪಡಿಸಿದರು.
Key words: KR constituency -my state- my country- MLA SA Ramadas.