ಕೆ.ಆರ್ ಆಸ್ಪತ್ರೆಯಲ್ಲಿ ತಂಗಲು ಇಲ್ಲದ ಸೂಕ್ತ ವ್ಯವಸ್ಥೆ: ಸಾರ್ವಜನಿಕರ ಬೇಸರ

ಮೈಸೂರು,ಜನವರಿ,13,2025 (www.justkannada.in):  ಚಲುವಾಂಬ ಆಸ್ಪತ್ರೆ ಆವರಣದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆನ್ನಲ್ಲೆ ಇದೀಗ ಕೆ.ಆರ್ ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರು ತಂಗಲು ಸೂಕ್ತ ವ್ಯವಸ್ಥೆ ಇಲ್ಲದ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆ.ಆರ್ ಆಸ್ಪತ್ರೆಯಲ್ಲಿ ತೆರೆದಿರುವ ತಂಗುದಾಣದಲ್ಲಿ ರೋಗಿಯ ಸಂಬಂಧಿಕರು ತಂಗಲು 30 ರೂ ನಿಗದಿ ಮಾಡಲಾಗಿದೆ. ಆದರೆ 30 ರೂ ಕೊಟ್ಟು ಅಲ್ಲಿ ಮಲಗಲು ಆಗದೆ ಬಡ ಜನರು ಹೊರ ಆವರಣದಲ್ಲೇ ನಿದ್ರಿಸುತ್ತಾರೆ. ಕೆ.ಆರ್ ಆಸ್ಪತ್ರೆಗೆ  ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಭಾಗದಿಂದ ನೂರಾರು ರೋಗಿಗಳ ಸಂಬಂಧಿಕರು ಬರುತ್ತಾರೆ. ಆದರೆ ಇವರಿಗೆ ತಂಗಲು ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಟ ನಡೆಸುವ ಪರಿಸ್ಥಿತಿ ಇದೆ.

ಚಳಿ, ಮಳೆ ಬಿಸಿಲೆನ್ನದೇ ಆಸ್ಪತ್ರೆಯ  ಆವರಣದಲ್ಲಿ ಸಾರ್ವಜನಿಕರು ಮಲಗುತ್ತಾರೆ. ಇಂದು ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ಮಲಗಿದ್ದ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕಂಡು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಡಾರ್ಮೆಂಟರಿ ಅಂತ ಮಾಡಿದ್ದಾರೆ. ಇಲ್ಲಿ ಪ್ರತಿ ದಿನ ಸಂಜೆ ತಂಗಲು 30 ರೂ.  ಕೊಟ್ಟು ಉಳಿದುಕೊಳ್ಳಬೇಕು. ಪೇಸೆಂಟ್ ವಾರ್ಡ್ ನ ಟೋಕನ್ ಪಡೆದು ಅದರ ಆಧಾರ ಮೇಲೆ ಒಬ್ಬರಿಗೆ 30 ರೂಗೆ ಒಂದು ಟಿಕೆಟ್ ಕೊಡುತ್ತಾರೆ. ಇವರು ಮಾಡಿರುವ ತಂಗುದಾಣದಲ್ಲಿ ಕೇವಲ 30 ರಿಂದ 40 ಜನ ತಂಗಬಹುದು. ಆದರೆ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಜನ ಬರುತ್ತಾರೆ, ಹೋಗುತ್ತಾರೆ. ಸಂಜೆ ವೇಳೆ ನೂರಾರು ಜನ ತಂಗುತ್ತಾರೆ. ತಂಗಲು ಸೂಕ್ತ ತಂಗುದಾಣ ಇಲ್ಲ. ಹಾಗಾಗಿ ಹೊರ ಭಾಗದಲ್ಲಿ ಮಲಗುತ್ತಾರೆ. ಈಗ ಭಾರಿ ಚಳಿ ಬೇರೆ ಇದೆ.  ಇದರಿಂದ ಬಹಳ ಕಷ್ಟ ಆಗುತ್ತಿದೆ. ಯಾರಿಗೇಳೋಣ ನಮ್ಮ ಕಷ್ಟ ಎನ್ನುತ್ತಾರೆ ರೋಗಿಗಳ ಸಂಬಂಧಿಕರು.

Key words: Public, sleeo, system , KR Hospital