ಮೈಸೂರು,ಮೇ,14,2021(www.justkannada.in): ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರು ಹಲ್ಲೆ ಮಾಡಿದ್ದಾರೋ ಅಂತವರ ಮೇಲೆ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಯಾವುದೇ ಕಾರಣಕ್ಕು ವೈದ್ಯರ ಮೇಲೆ ಹಲ್ಲೆ ಆಗಬಾರದು. ಈಗಾಗಲೇ ಕೆ.ಆರ್.ಆಸ್ಪತ್ರೆಯಲ್ಲಿ ಬಂದೋಬಸ್ತ್ ಮಾಡುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಕೆ.ಆರ್.ಆಸ್ಪತ್ರೆಗೆ ಅಡಿಷನಲ್ ಡೀನ್ ನೇಮಕ ಮಾಡುತ್ತೇವೆ. ಒಬ್ಬರಿಂದ ಕಾರ್ಯದೊತ್ತಡ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಸಿಎಂ ಅವರ ಜೊತೆಯು ಮಾತಾಡಿದ್ದೇನೆ. ವೈದ್ಯರಿಗೆ ಇನ್ಮುಂದೆ ಈ ರೀತಿ ಆಗದಂತೆ ಆಸ್ಪತ್ರೆಯಲ್ಲಿ ಬಂದೋಬಸ್ತ್ಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಮೈಸೂರಿನಲ್ಲಿ ಇಬ್ಬರಿಗೆ ಮಾತ್ರ ಬ್ಲಾಕ್ ಫಂಗಸ್ ಸಮಸ್ಯೆ..
ಮೈಸೂರಿನಲ್ಲಿ ಬ್ಲಾಕ್ ಫಂಗಸ್ ಭಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಮೈಸೂರಿನಲ್ಲಿ ಇಬ್ಬರಿಗೆ ಮಾತ್ರ ಆ ಸಮಸ್ಯೆ ಕಾಡಿದೆ. ಆದರೆ ಇದರಿಂದ ಯಾವುದೇ ಸಾವು ಸಂಭವಿಸಿಲ್ಲ. ಕೋವಿಡ್ ಗೆ ಒಳಗಾದ ವ್ಯಕ್ತಿ ಕೆ ಆರ್ ಆಸ್ಪತ್ರೆಯಲ್ಲಿ 14 ರಿಂದ 15 ದಿನ ಇದ್ರು. ಅವರಿಗೆ ಈ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ. ಅವರಿಗೆ ಇದೀಗಾ ಸೂಕ್ತ ಚಿಕಿತ್ಸೆ ನಡೆಯುತ್ತಿದೆ. ಯಾವುದೇ ಆತಂಕ ಬೇಡ’ ವೈದ್ಯರು ಅವರ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಲಾಕ್ಡೌನ್ ಮತ್ತೆ ಮುಂದುವರೆಸುವ ವಿಚಾರ ಕುರಿತು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್ , ಜನತಾ ಕರ್ಫ್ಯೂ ವೇಳೆ ಸಾವಿರಾರು ಜನ ಸೇರುವಂತೆ ಆಯ್ತು. ಇನ್ನು ಕಠಿಣ ಆಗಬೇಕೆಂದು ಸಂಪುಟ ಸಭೆಯಲ್ಲಿ ಲಾಕ್ ಡೌನ್ ತೀರ್ಮಾನ ಆಯ್ತು. ಆದರು ಜನರು ಪ್ರತಿದಿನ ಅನವಶ್ಯಕವಾಗಿ ಓಡಾಡುತ್ತಿದ್ದಾರೆ. ಪ್ರತಿದಿನ ದಿನಸಿ ಅಂಗಡಿ ಇದ್ದರು ಒಂದೇ ದಿನ ಎಲ್ಲ ಕೊಂಡುಕೊಳ್ಳಲು ಜನರು ಬರುತ್ತಿದ್ದಾರೆ. ಸದ್ಯ ಈಗಿನ ಲಾಕ್ ಡೌನ್ ಮೇ.24ರ ವರೆಗು ಇದೆ. ಇನ್ನು ಸಮಯ ಇದೆ’ ಆನಂತರ ಈ ಬಗ್ಗೆ ನಿರ್ಧಾರಕ್ಕೆ ಅವಕಾಶ ಇದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ENGLISH SUMMARY…
Minister S.T. Somashekar orders legal action against those who attacked doctors at K.R. Hospital
Mysuru, May 14, 2021 (www.justkannada.in): Mysuru District In-charge Minister S.T. Somashekar has ordered the officials concerned to take action against the people who attacked the doctors at K.R. hospital, in Mysuru.
Speaking in Mysuru today the Minister said that such incidents should not repeat. “I have asked the Police Commissioner to provide proper security to the staff working at K.R. Hospital. We have also planned to appoint an additional Dean to the hospital to reduce the work pressure. I have already spoken about this with the Chief Minister. We will take all necessary measures to protect the doctors and stop repeating such incidents,” he explained.
In his response to the question of the ‘Black Fungus’ problem that is appearing among COVID patients in Mysuru, he said that only one case was found and no fatality has been reported. The infected person was at K.R. Hospital for 14-15 days. He faced the ‘Black Fungus’ problem after he was discharged from the hospital, but he is being treated now and the doctor has informed him that there is no need to panic.
In his response to the continuation of the lockdown, the Minister said there is still to decide on it.
Keywords: Mysuru District In-charge Minister/ S.T. Somashekar/ attack on doctor/ orders legal action against attackers/ Black Fungus/Lockdown
key words: KR Hospital-doctor-assult- Minister- ST Somashekhar -action