ಮಂಡ್ಯ,ಆ,13,2020(www.justkannada.in): ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಒಳಹರಿವು ಹೆಚ್ಚಳವಾದ ಹಿನ್ನೆಲೆ ಕೆ.ಆರ್ ಎಸ್ ಜಲಾಶಯ ಭರ್ತಿಗೆ ಇನ್ನ ಒಂದೇ ಅಡಿ ಮಾತ್ರ ಬಾಕಿ ಇದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಇಂದು ಸಂಜೆ ವೇಳೆಗೆ ಭರ್ತಿಯಾಗುವ ಸಾಧ್ಯತೆ ಇದೆ. 124.80 ಅಡಿ ಗರಿಷ್ಠ ಸಾಮರ್ಥ್ಯ ವನ್ನ ಕೆಆರ್ಎಸ್ ಜಲಾಶಯ ಹೊಂದಿದ್ದು ಪ್ರಸ್ತುತ ನೀರಿನ ಮಟ್ಟ 123 ಅಡಿ ಗಡಿ ದಾಟಿದೆ. ಈ ಮೂಲಕ ಜಲಾಶಯ ಭರ್ತಿಯಾಗಲು ಇನ್ನ ಒಂದು ಅಡಿಯಷ್ಟೇ ಬಾಕಿ ಇದೆ.
20,923 ಕ್ಯೂಸೆಕ್ ಒಳಹರಿವಿನ ಪ್ರಮಾಣವಿದ್ದು ಜಲಾಶಯದಿಂದ 3,756 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ. ಕೆಆರ್ ಎಸ್ ಜಲಾಶಯ ಗರಿಷ್ಠ 49.454 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಜಲಾಶಯದಲ್ಲಿ ಪ್ರಸ್ತುತ 47.038 ಟಿಎಂಸಿ ನೀರು ಸಂಗ್ರಹವಾಗಿದೆ.
Key words: KRS –dam-filled – evening-rain