ಮಂಡ್ಯ,ಜೂ,28,2019(www.justkannada.in): ಬೆಳೆಗಳಿಗೆ ಕೆ.ಆರ್ ಎಸ್ ನಿಂದ ನೀರುವ ಹರಿಸುವಂತೆ ಆಗ್ರಹಿಸಿ ಕೆ.ಆರ್ ಎಸ್ ಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆ.ಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಂಡ್ಯದಿಂದ ಆಗಮಿಸಿದ ರೈತರು 15 ನಿಮಿಷದೊಳಗೆ ನೀರು ಹರಿಸದಿದ್ದರೇ ಕೆ.ಆರ್ ಎಸ್ ಮುತ್ತಿಗೆ ಹಾಕುವುದಾಗಿ ಗಡುವು ನೀಡಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಅಧಿಕಾರಿಗಳು ನೀರು ಬಿಡದ ಹಿನ್ನೆಲೆ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕೆ.ಆರ್ ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ರೈತರು ಯತ್ನಿಸಿದರು. ಈ ವೇಳೆ ಕಾರ್ಯಪ್ರವೃತ್ತರಾದ ಪೊಲೀಸರು ರೈತರನ್ನ ವಶಕ್ಕೆ ಪಡೆದು ಸುಮಾರು ಐದು ಬಸ್ ಗಳಲ್ಲಿ ಬೇರೆಡೆಗೆ ರೈತರನ್ನ ಸ್ಥಳಾಂತರಿಸಿದರು. ರೈತರ ಮುತ್ತಿಗೆ ಹಿನ್ನೆಲೆ ಮುಂಜಾಗ್ರತವಾಗಿ ಕೆ.ಆರ್ ಎಸ್ ಸುತ್ತ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿತ್ತು.
Key words: KRS- demanding – crops-farmers- Darshan puttanayya –protest-custody.