KRS:‌ 1,00,000 ಕ್ಯೂಸೆಕ್ ನೀರು ಕಾವೇರಿ ನದಿಗೆ, ಬೃಂದಾವನ ಗಾರ್ಡನ್‌ ಸೇತುವೆಗೆ ನಿರ್ಬಂಧ..!

KRS reaches maximum level:  Brindavan Garden bridge restricts tourists

 

Right now, Water is flowing over the bridge that runs from KRS Dam to Karanji in Brindavan Garden. As a precautionary measure, tourists are now restricted from going on the bridge.

ಮಂಡ್ಯ, ಜು,25,2024: (www.justkannada.in news) ಇಲ್ಲಿನ ಕೃಷ್ಣರಾಜಸಾಗರಕ್ಕೆ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಡ್ಯಾಂ ನೀರಿನ ಸಂಗ್ರಹದ ನಿರ್ಧಿಷ್ಟ ಮಟ್ಟ ತಲುಪಿದ್ದು, ಹೊರ ಹರಿವಿನ ಪ್ರಮಾಣದಲ್ಲೂ ಗಣನೀಯ ಹೆಚ್ಚಳವಾಗಿದೆ.

ಕೆ.ಆರ್.ಎಸ್ ಜಲಾಶಯದಿಂದ ಸುಮಾರು 1,00,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದ್ದು, ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಾನಗಳಿಗೆ ತೆರಳಲು ಕಾವೇರಿ ನೀರವರಿ ನಿಗಮದ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇದೀಗ. ಕೆ.ಆರ್.ಎಸ್.‌ ಡ್ಯಾಂ ನಿಂದ  ಬೃಂದಾವನ ಗಾರ್ಡನ್ನಲ್ಲಿರುವ ಕಾರಂಜಿಗೆ ನಡೆದು ಹೋಗುವ ಸೇತುವೆ ಮೇಲೆ ನೀರು ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪ್ರವಾಸಿಗರಿಗೆ ಈಗ ಸೇತುವೆ ಮೇಲೆ ತೆರಳಲು ನಿರ್ಬಂಧವಿಧಿಸಲಾಗಿದೆ.

ಕಳೆದ ಬೇಸಿಗೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ಬತ್ತಿ ಹೋಗಿದ್ದವು. ಇದೀಗ ಮುಂಗಾರು ಮಳೆ ನಿರೀಕ್ಷೆಯಂತೆ ಬೀಳುತ್ತಿರುವುದರಿಂದ  ಎಲ್ಲಾ ಡ್ಯಾಂಗಳಲ್ಲೂ ನೀರು ಸಂಗ್ರಹಗೊಂಡು  ನೀರಿನ ಮಟ್ಟ ಏರಿಕೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ನಿರಂತವಾಗಿ ಸುರಿಯುತ್ತಿದ್ದು, ಕಾವೇರಿ ಒಡಲು ತುಂಬಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂಗೆ  42045 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಕ್ಷಣ ಕ್ಷಣಕ್ಕೂ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಸದ್ಯ ಗರಿಷ್ಠ ಮಟ್ಟ ಮುಟ್ಟಿದ್ದು, ೧೨೪.೮೦ ಅಡಿಗೆ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ತಲುಪಿದೆ.

ನೀರಿನ ಸಂಗ್ರಹದಲ್ಲಿ ಕೆ ಆರ್‌ ಎಸ್‌ ಲ್ಲಿ ಭಾರಿ ಏರಿಕೆ ಕಂಡಿದ್ದು, ಕೆಆರ್‌ಎಸ್‌ನಲ್ಲಿ ಗರಿಷ್ಠ ಮೊತ್ತವಾದ  ೪೯.೪೫೨  ಟಿಎಂಸಿ ನೀರು ಸಂಗ್ರವಾಗಿದೆ. ಇಂದಿನ ಕೆಆರ್‌ಎಸ್ ನೀರಿನ ಮಟ್ಟ ಗರಿಷ್ಠ ಮಟ್ಟ 124.80 ಅಡಿ , ಸಾಮರ್ಥ್ಯ 49.452 ಟಿಎಂಸಿ, ಒಳ ಹರಿವು ೪೨೦೪೫ ಕ್ಯೂಸೆಕ್ ಹೊರ ಹರಿವು  ೪೦೯೧೪ ಕ್ಯೂಸೆಕ್. (ಕಾಲುವೆ ಹಾಗೂ ನೀರು ಪೂರೈಕೆ ಸೇರಿ)

key words: KRS, reaches, maximum level, Brindavan Garden, bridge, restricts tourists