ನಿಮ್ಮ ಕೈಯಲ್ಲಿ ಆದ್ರೆ ಕ್ರಮಕ್ಕೆ ಮುಂದಾಗಿ: ಇಲ್ಲ ಅಂದ್ರೆ ಪ್ರಕರಣ ಸಿಬಿಐಗೆ ವಹಿಸಿ-ಸಮ್ಮಿಶ್ರ ಸರ್ಕಾರಕ್ಕೆ ಕೆ.ಎಸ್ ಈಶ್ವರಪ್ಪ ಆಗ್ರಹ…

ಶಿವಮೊಗ್ಗ,ಜೂ,12,2019(www.justkannada.in):  ಹೂಡಿಕೆದಾರರಿಗೆ ಐಎಂಎ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

ಐಎಂಎ ಕಂಪನಿಯಿಂದ 10ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆಯಾಗಿದೆ. ಹೀಗಾಗಿ ನಿಮ್ಮ ಕೈಯಲ್ಲಿ ಆದ್ರೆ ಕ್ರಮವಹಿಸಲು ಮುಂದಾಗಿ ಇಲ್ಲದಿದ್ರೆ ಪ್ರಕರಣವನ್ನ ಸಿಬಿಐಗೆ ವಹಿಸಿ ಎಂದು ಶಾಸಕ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.

ಪ್ರಕರಣ ಕುರಿತು ಇಂದು ಶಿವಮೊಗ್ಗದಲ್ಲಿ ಮಾತನಾಡಿದ.ಕೆ.ಎಸ್ ಈಶ್ವರಪ್ಪ,ಐಎಂಎ ಮೂಲಕ 10 ಸಾವಿರ ಕೋಟಿಗೂ ಅಧಿಕ ವಂಚನೆ ಆಗಿದೆ. ಇದರಲ್ಲಿ ಅನೇಕ ರಾಜಕೀಯ ವ್ಯಕ್ತಿಗಳ ಹೆಸರು ಕೇಳಿಬರುತ್ತಿದೆ. ಸರಕಾರ ಅಸಹಾಯಕತೆ ರೀತಿಯಲ್ಲಿ ವರ್ತನೆ ಮಾಡುತ್ತಿದೆ, ಕೂಡಲೇ ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.

ಐಎಂಎ ವಂಚನೆಯಿಂದ  ಬಡ ಮದ್ಯಮ ವರ್ಗದವರೂ ಬೀದಿಗೆ ಬಂದಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಸರಕಾರಕ್ಕೆ ಕಿವಿ ಕಣ್ಣು ಹೃದಯ ಇಲ್ವಾ ಎಂದು ಪ್ರಶ್ನಿಸಿದ ಕೆ.ಎಸ್ ಈಶ್ವರಪ್ಪ, ಇದೊಂದು ಕರ್ನಾಟಕದಲ್ಲೇ ದೊಡ್ಡ ಹಗರಣ. ಇದರಿಂದ ಯಾವುದೇ ಸಂಸ್ಥೆಯಲ್ಲಿ ಜನರು ಹೂಡಿಕೆ ಮಾಡುವುದಕ್ಕೆ ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.  ಸರಕಾರದ ಕೈಯಲ್ಲಿ ಆದ್ರೆ ಕ್ರಮಕ್ಕೆ ಮುಂದಾಗಲಿ. ಇಲ್ಲದಿದ್ದರೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ ಎಂದರು.

Key words: KS Eshwarappa demanded a CBI probe into the IMA Fraud case.

#KSEshwarappa #demanded #CBI #probe  #IMA #Fraudcase.