ಬಾಗಲಕೋಟೆ, ಅಕ್ಟೋಬರ್ ,18,2024 (www.justkannada.in): ಕಳೆದ ಲೋಕಸಭೆ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ತೊರೆದಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಈಗ ಮತ್ತೆ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕೆ.ಎಸ್ ಈಶ್ವರಪ್ಪ, ನಾನು ಸದ್ಯಕ್ಕೆ ಬಿಜೆಪಿಗೆ ಹೋಗುವ ಚಿಂತನೆ ಇಲ್ಲ ಅನೇಕರು ಬಿಜೆಪಿಗೆ ವಾಪಸ್ ಬನ್ನಿ ಎಂದು ಕರೆಯುತ್ತಿದ್ದಾರೆ. ಬಿಜೆಪಿಯಲ್ಲಿ ನನಗೆ ಸಾಕಷ್ಟು ಅನ್ಯಾಯ ಆಗಿದೆ. ಬಿಜೆಪಿಯಲ್ಲಿರುವ ಕುಟುಂಬ ರಾಜಕಾರಣದ ವಿರುದ್ದ ಹೋರಾಟ ಮಾಡುತ್ತೇನೆ ಎಂದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಕ್ಲೀನ್ ಚಿಟ್ ಪಡೆದು ಬರಲಿ. ಅಹಿಂದಾ ಸಮುದಾಯವನ್ನರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಬೇಸರವಾಗಿದೆ ಎಂದು ಹೇಳಿದರು.
ಜಾತಿಜನಗಣತಿ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಕಾಂತರಾಜ ವರದಿ ಬಿಡುಗಡೆಗೆ ಈ ಹಿಂದೆಯೇ ಒತ್ತಾಯಿಸಿದ್ದೆ. ಆಗಲೂ ಸಿದ್ಧರಾಮಯ್ಯ ಉತ್ತರ ಕುಮಾರನ ಪೌರುಷ ತೋರಿದರು ಕಾಂಗ್ರೆಸ್ ನವರಿಗೆ ಯಾವುದೇ ಕಳಕಳಿ ಇಲ್ಲ ಎಂದು ಕಿಡಿಕಾರಿದರು.
Key words: KS Eshwarappa, join, BJP, again