ಹುಬ್ಬಳ್ಳಿ,ಮೇ,5,2023(www.justkannada.in): ಕೆಪಿಸಿಸಿ ಅಧ್ಯಕ್ಷರು ಒಕ್ಕಲಿಗರೆಲ್ಲಾ ನನ್ನ ಹಿಂದೆ ಬನ್ನಿ ಅಂತಾರೆ. ಇವನಿಗಿಂತ ಜಾತಿವಾದಿ ಬೇರೆಯವರು ಬೇಕಾ..? ಎಂದು ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಡಿಕೆ ಶಿವ ಕುಮಾರ್ ಅಂತ ಹೆಸರು ಯಾಕೆ ಬೇಕು. ಕೆಡಿ ಶಿವಕುಮಾರ್ ಅಂತಾ ಹೆಸರು ಇಡ್ಕೊ ಎಂದು ಕಿಡಿಕಾರಿದರು.
ಭಜರಂಗದಳ ನಿಷೇಧದ ಬಗ್ಗೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಬಜರಂಗದಳ ಭಾರತೀಯ ಸಂಸ್ಕೃತಿ ರಕ್ಷಣೆ ಮಾಡುವ ಸಂಘಟನೆ. ಪಿಎಫ್ ಐಗೆ ಭಜರಂಗದಳ ಹೋಲಿಸಿದ್ದು ದೊಡ್ಡ ದುರಂತ ಎಂದು ವಾಗ್ದಾಳಿ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿಯವರನ್ನು ವಿಷಸರ್ಪಕ್ಕೆ ಹೋಲಿಸಿದಾಗ, ಮಲ್ಲಿಕಾರ್ಜುನ್ ಖರ್ಗೆ ಅವರ ಜೀವನ ಸಾಧನೆ ಮಣ್ಣುಪಾಲಾಯ್ತು. ಇನ್ನು ಪುತ್ರ, ಶಾಸಕ ಪ್ರಿಯಾಂಕ್ ಖರ್ಗೆ ಕೂಡಾ ಪ್ರಧಾನಿ ಮೋದಿಯವರ ಬಗ್ಗೆ ಮಾತಿನಾಡಿದ್ದಾರೆ. ಇದು ಆನೆ ಗಾತ್ರದ ಮೋದಿಯವರ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ ಖರ್ಗೆ ಮಾತನಾಡಿದ ಹಾಗೆ ಎಂದು ಲೇವಡಿ ಮಾಡಿದರು.
ಜಗದೀಶ್ ಶೆಟ್ಟರ್ ಎಂದೂ ಸಿದ್ದಾಂತವನ್ನ ಬಿಟ್ಟಿ ಹೋಗಿಲ್ಲ. ಪ್ರಧಾನಿ ಫೋಟೊವನ್ನ ಇಟ್ಟುಕೊಂಡಿದ್ದಾರೆ. ಅವರೇ ಯಾರೋ ಒಬ್ಬ ವ್ಯಕ್ತಿ ಅಂದಿದ್ದಾರೆ. ಆ ವ್ಯಕ್ತಿಯಿಂದ ಪಕ್ಷ ಬಿಟ್ಟಿದ್ದೇನೆಂದಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.
Key words: KS Eshwarappa-outrage-DK Shivakumar-bhajaranga dal