ಶಿವಮೊಗ್ಗ,ಸೆಪ್ಟಂಬರ್,17,2022(www.justkannada.in): ಆರೋಪ ಮುಕ್ತನಾದರೂ ಸಹ ಸಚಿವ ಸ್ಥಾನ ನೀಡಿದಿರುವ ಕುರಿತು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತೆ ಬೇಸರ ಹೊರ ಹಾಕಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಇವತ್ತೆ ಬಂದು ಸಚಿವನಾಗು ಅಂದರೂ ನಾನು ಸಿದ್ಧ. ಕೇಂದ್ರ ನಾಯಕರ ಜತೆ ರಾಜ್ಯ ನಾಯಕರು ಚರ್ಚಿಸಬೇಕು. ಅದರೆ ಏಕೆ ಹಿಂದೇಟು ಹಾಕುತ್ತಿದ್ದಾರೆ ಗೊತ್ತಿಲ್ಲ. ಖಾಲಿ ಇರುವ ಎಲ್ಲಾ ಸಚಿವ ಸ್ಥಾನ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದರು ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರು ಮಾತು ನೀಡಿದ್ದರು. ಇನ್ನೂ ಏಕೆ ಕೊಟ್ಟಿಲ್ಲ. ಅವರನ್ನೇ ಕೇಳಬೇಕು. ನಾನು ಇವತ್ತೇ ಮದುವೆ ಗಂಡು ಆಗಲು ರೆಡಿ. ಬೇರೆಯವರ ರಾಜೀನಾಮೆ ವಿಚಾರ , ನನ್ನ ರಾಜೀನಾಮೆ ವಿಚಾರ ಬೇರೆ. ಎಲ್ಲವನ್ನೂ ಹೋಲಿಕೆ ಮಾಡಬಾರದು ಎಂದು ಕೆ.ಎಸ್ ಈಶ್ವರಪ್ಪ ನುಡಿದರು.
Key words: KS Eshwarappa – ready – today- becomes – minister