ಶಿವಮೊಗ್ಗ,ಸೆಪ್ಟಂಬರ್,22,2023(www.justkannada.in): ರಾಜ್ಯದಲ್ಲಿ ಕಾವೇರಿ ನೀರು ಹೋರಾಟದ ಕಿಚ್ಚು ಜೋರಾಗಿದ್ದು ತಮಿಳುನಾಡಿಗೆ ನೀರು ಬಿಡದಂತೆ ಸರ್ಕಾರಕ್ಕೆ ಒತ್ತಡ ಹೆಚ್ಚಾಗಿದೆ. ಈ ಮಧ್ಯೆ ಕಾವೇರಿ ನದಿ ನೀರು ವಿವಾದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕಾರಣ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ದೊಡ್ಡ ಮನುಷ್ಯ ಆಗಲು ಡಿಕೆ ಶಿವಕುಮಾರ್ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ನೀರಾವರಿ ತಜ್ಞ ಇದ್ದಾರೆ. ಆದರೆ ಅವರ ಸಲಹೆ ಪಡೆದಿಲ್ಲ. ನೀರು ಬಿಟ್ಟು ಸೋನಿಯಾ ಗಾಂಧಿ ಮತ್ತು ತಮಿಳುನಾಡಿನ ಸಿಎಂ ತೃಪ್ತಿಪಡಿಸಿದ್ದಾರೆ. ಹೀಗಾಗಿ ಕಾವೇರಿ ನದಿ ನೀರು ವಿವಾದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕಾರಣ. ತಕ್ಷಣವೇ ಡಿಕೆ ಶಿವಕುಮಾರ್ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Key words: KS Eshwarappa-resignation – DCM-DK Shivakumar – Cauvery – water dispute.