ಡೆತ್ ನೋಟ್ ಬರೆದಿಟ್ಟು ‘KSDL’ ಅಧಿಕಾರಿ ಆತ್ಮಹತ್ಯೆಗೆ ಶರಣು

ಬೆಂಗಳೂರು,ಡಿಸೆಂಬರ್,30,2024 (www.justkannada.in): ಕೆಎಸ್ ಡಿ ಎಲ್ ಅಧಿಕಾರಿ ಡೆತ್ ನೋಟ್ ಬರೆದಿಟ್ಟು  ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಮೃತ್ (40) ಆತ್ಮಹತ್ಯೆಗೆ ಶರಣಾದ ಕೆಎಸ್ ಡಿ ಎಲ್ ಅಧಿಕಾರಿ. ಡೆತ್ ನೋಟ್ ಅನ್ನು ಕೈಯಲ್ಲಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡಿ.28 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು,  ಅಮೃತ್ KSDL’ ನ ಮೆಟಿರಿಯಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಅಮೃತ್ 2019 ರಲ್ಲಿ 2 ನೇ ಮದುವೆಯಾಗಿದ್ದರು. ಈ ನಡುವೆ ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಎಂದು ಹೇಳಲಾಗುತ್ತಿದೆ. ಘಟನೆ ಸ್ಥಳಕ್ಕೆ ಮಹಾಲಕ್ಷ್ಮೀ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: KSDL, officer, suicide, death note