ಮೈಸೂರು,ಆಗಸ್ಟ್,26,2021 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಟ್ಟಡಗಳ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿತರಾದ ಸಮುಚ್ಚಿತ ಗುತ್ತಿಗೆದಾರರಿಂದ ಐಟಂವಾರು ಟೆಂಡರ್‌ಗಳನ್ನು ಆಹ್ವಾನಿಸಿದೆ.
ರಾಮನಗರ ಜಿಲ್ಲೆಯ ತಿಪ್ಪಸಂದ್ರ ಗ್ರಾಮದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಕೇಂದ್ರ ಹಾಗೂ ಕರಾಮುವಿಯ (Karnataka State Open University -KSOU ) ಪ್ರಾದೇಶಿಕ ಕೇಂದ್ರ ಕಟ್ಟಡಗಳ ನಿರ್ಮಾಣ ಮತ್ತು ಮಂಗಳೂರು, ಧಾರವಾಡ ಜಿಲ್ಲೆಗಳಲ್ಲಿ ಪ್ರಾದೇಶಿಕ ಕೇಂದ್ರ ಕಟ್ಟಡಗಳ ನಿರ್ಮಾಣ ಹಾಗೂ ವಿವಿ ನಿಲಯದಲ್ಲಿ ಹಂಸ ಮತ್ತು ಮಾನಸ ಕಟ್ಟಡಗಳ ಉನ್ನತೀಕರಣ ಮತ್ತು ವಿವಿ ನಿಲಯವು ದತ್ತು ಪಡೆದಿರುವ ಶಾಲೆಗಳ ಕಟ್ಟಡ ನಿರ್ಮಾಣ ಹಾಗೂ ದುರಸ್ತಿ ನಿರ್ವಹಣೆ ಮತ್ತು ಇತರೆ ಕೆಲಸಗಳಿಗೆ ಟೆಂಡರ್ ಆಹ್ವಾನ ಮಾಡಲಾಗಿದೆ.
ಅಂದಾಜು ವೆಚ್ಚ (ರೂ.ಲಕ್ಷಗಳಲ್ಲಿ): 7607.00 ಲಕ್ಷಗಳು. ಇ.ಎಂ.ಡಿ. (ರೂ. ಲಕ್ಷಗಳಲ್ಲಿ): 76.07 ಲಕ್ಷಗಳು, ಕಾಲಾವಧಿ: 18 ತಿಂಗಳು (ಮಳೆಗಾಲ ಸೇರಿದಂತೆ), ಗುತ್ತಿಗೆದಾರರ ದರ್ಜೆ: 1ನೇ ದರ್ಜೆ (ಕೆಪಿಡಬ್ಲೂಡಿ).
ಇ-ಪೋರ್ಟ್‌ನಲ್ಲಿ ಟೆಂಡರ್ ಪ್ರಕಟಣೆ ದಿನಾಂಕ : 01.09.2021ರ ಸಂಜೆ 4.00 ಗಂಟೆ ನಂತರ, 2) ವಿವರಣೆ ಸ್ಪಷ್ಟಿಕರಣ ಕೋರಲು ಕೊನೆಯ ದಿನಾಂಕ ಮತ್ತು ಸಮಯ : 06.09.2021ರ ಸಂಜೆ 4.00 ಗಂಟೆ ತನಕ, 3) ಟೆಂಡರ್ನ ಪೂರ್ವಭಾವಿ ಸಭೆಯ ದಿನಾಂಕ ಮತ್ತು ಸಮಯ : 08.09.2021ರ ಬೆಳಗ್ಗೆ 11.00 ಗಂಟೆಗೆ 4) ಭರ್ತಿ ಮಾಡಿದ ಟೆಂಡರ್ ಅಪ್ ಲೋಡ್ ಮಾಡಲು ಕೊನೆಯ ದಿನಾಂಕ : 01.10.2021ರ ಸಂಜೆ 4.00 ಗಂಟೆ ತನಕ, 5) ಟೆಕ್ನಿಕಲ್ ಬಿಡ್ನ ಟೆಂಡರ್‌ಗಳನ್ನು ತೆರೆಯುವ ದಿನಾಂಕ : 04.10.2021 ರಂದು ಸಂಜೆ 5.00 ಗಂಟೆಗೆ.
ಗುತ್ತಿಗೆದಾರರು ಭರ್ತಿ ಮಾಡಿದ ಟೆಂಡರ್ ಗಳನ್ನು ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ನ ಮುಖಾಂತರ ಸಲ್ಲಿಸಬೇಕಾಗಿದೆ. ಟೆಂಡರ್‌ಗಳನ್ನು ಲೋಕೋಪಯೋಗಿ ಇಲಾಖೆ ಆನ್ ಲೈನ್ ಮುಖಾಂತರ ದಿನಾಂಕ 1-10-2021ರ ಸಂಜೆ 4 ಗಂಟೆವರೆಗೆ ಸ್ವೀಕಾರ ಮಾಡಲಿದೆ.
ಟೆಂಡರ್ ಗೆ ಸಂಬಂಧಪಟ್ಟ ಮಾಹಿತಿಗಳನ್ನು ಟೆಂಡರ್ ದಾರರು ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಟೆಂಡರ್‌ಗಳನ್ನು www.eproc.karnataka.gov.in ಈ ವೆಬ್ ಸೈಟ್ ಮೂಲಕ ಪಾವತಿಸಬೇಕು. ಟೆಂಡರ್ ಫಾರಂ ಬೆಲೆಯನ್ನು ಆನ್ ಲೈನ್ ಮುಖಾಂತರ ಪಾವತಿಸಬೇಕು. ಆಸಕ್ತಿಯುಳ್ಳ ಟೆಂಡರ್ ದಾರರು ಇ-ಪ್ರೊಕ್ಯೂರ್ ಮೆಂಟ್ ಫ್ಲ್ಯಾಟ್ ಫಾರಂನಲ್ಲಿ ನೋಂದಣಿ ಸಲ್ಲಿಸಬೇಕಾಗಿರುತ್ತದೆ ಎಂದು ಕರಾಮುವಿ (Karnataka State Open University -KSOU ) ಜಾಹಿರಾತು ಪ್ರಕಟಣೆಯಲ್ಲಿ ತಿಳಿಸಿದೆ.
Key words: KSOU- building- construction-tender