ಮೈಸೂರು, ಮೇ 27, 2019 : (www.justkannada.in news ): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2011-12 ಮತ್ತು 2012-13 ನೇ ಸಾಲಿನಲ್ಲಿ ಅಂತರ್ ಗೃಹ ( In-house ) ಬಿ.ಎ/ಬಿ.ಕಾಂ ಗೆ ಪ್ರವೇಶ ಪಡೆದು ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಹಾಗೂ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೆ ಮರು ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ.
ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮರು ಪರೀಕ್ಷೆಗೆ ಅವಕಾಶ ಕಲ್ಪಿಸುವ ಈ ಪ್ರಮುಖ ತೀರ್ಮಾನವನ್ನು ಮುಕ್ತ ವಿವಿ ತೆಗೆದುಕೊಂಡಿದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದಿಷ್ಟು….
ವಿಶ್ವವಿದ್ಯಾನಿಲಯದಲ್ಲಿ ಜಾರಿಯಲ್ಲಿದ್ದ ನಿಯಮಾವಳಿಗಳ ಪ್ರಕಾರ ಹಾಗೂ ಕರ್ನಾಟಕ ಸರಕಾರದ ಆದೇಶದಂತೆ ಪರೀಕ್ಷೆ ಬರೆಯಲು ಅವಕಾಶ ಕೊಡುವ ಉದ್ದೇಶದಿಂದ ಅಂತರ್ ಗೃಹ (ಟಿ-ಠಣಜ) 2011-12 ನೇ ಸಾಲಿನ ಬಿ.ಎ/ಬಿ.ಕಾಮ್ ವಿದ್ಯಾರ್ಥಿಗಳಿಗೆ ಒಂದು ಅವಕಾಶವನ್ನು ಹಾಗೂ 2012-13ನೇ ಸಾಲಿನ ಬಿ.ಎ/ಬಿ.ಕಾಮ್ ವಿದ್ಯಾರ್ಥಿಗಳಿಗೆ ಎರಡು ಅವಕಾಶಗಳನ್ನು ನೀಡುವ ಮೂಲಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಒಂದೆರಡು ದಿನಗಳಲ್ಲಿ ಅಧಿಕೃತ ಪ್ರಕಟಣೆ ಸಹ ಹೊರಡಿಸಲಾಗುತ್ತದೆ.
ಪರೀಕ್ಷೆಗೆ ಹಾಜರಾಗುವ ಬಗ್ಗೆ :
2018-19 ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ 12,000 ವಿದ್ಯಾರ್ಥಿಗಳು ಸಹ ವಿಶ್ವವಿದ್ಯಾನಿಲಯವು ಪ್ರಕಟಿಸುವ ವೇಳಾಪಟ್ಟಿಯ ಪ್ರಕಾರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಈ ಬಗ್ಗೆ ಪ್ರಕಟಣೆಯನ್ನು ಒಂದೆರಡು ದಿನಗಳಲ್ಲಿ ಹೊರಡಿಸಲಾಗುವುದು.
ಪಿ.ಹೆಚ್.ಡಿ ಗೆ ಅನುಮತಿ ನೀಡುವ ಬಗ್ಗೆ :
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಮುಕ್ತ ವಿವಿಯ ಮಾನ್ಯತೆಯನ್ನು 2012-13 ನೇ ಸಾಲಿನಿಂದ ಅನ್ವಯವಾಗುವಂತೆ ದಿನಾಂಕ 16.05.2015ರ ಅಧಿಸೂಚನೆಯಲ್ಲಿ ಹಿಂಪಡೆದಿದ್ದ ಪ್ರಯುಕ್ತ ಸಂಶೋಧನಾರ್ಥಿಗಳಿಗೆ ಪಿ.ಹೆಚ್.ಡಿ ಪದವಿಗೆ ಪ್ರವೇಶಾತಿಗಳನ್ನು ತಡೆಹಿಡಿಯಲಾಗಿತ್ತು. ಈಗ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಮಾನ್ಯತೆಯನ್ನು ಪುನರ್ ಸ್ಥಾಪಿಸಿರುತ್ತದೆ. ಆದ್ದರಿಂದ, ಈ ವಿಶ್ವವಿದ್ಯಾನಿಲಯದಲ್ಲಿ 2008 ಮತ್ತು 2012ರ ಪಿ.ಹೆಚ್.ಡಿ ಪರಿನಿಯಮಗಳ ಪ್ರಕಾರ ನೋಂದಣಿ ಮಾಡಿಕೊಂಡಿದ್ದ ಸಂಶೋಧನಾರ್ಥಿಗಳ ಸಂಶೋಧನಾ ಕಾರ್ಯವನ್ನು ಮುಂದುವರೆಸುವ ಬಗ್ಗೆ ಮುಕ್ತ ವಿವಿ ತೀರ್ಮಾನ ತೆಗೆದುಕೊಂಡಿದೆ.
ವಿವರಗಳು ಕೆಳಕಂಡಂತಿವೆ:
ಕೋರ್ಸ್ ವರ್ಸ್ ಮಾಡಬೇಕಾಗಿರುವ ವಿದ್ಯಾರ್ಥಿಗಳು (87) ಮೌಖಿಕ ಪರೀಕ್ಷೆಗೆ ಹಾಜರಾಗಬೇಕಾಗಿರುವ ವಿದ್ಯಾರ್ಥಿಗಳು (02), ಪ್ರಬಂಧಗಳ ಮೌಲ್ಯಮಾಪನ ಮಾಡಬೇಕಾಗಿರುವ ವಿದ್ಯಾಥಿಗಳು (14) ಕ್ರೋಢೀಕೃತ ವರದಿ ಅಗತ್ಯವಿರುವ ವಿದ್ಯಾರ್ಥಿಗಳು (10) ಡಾಕ್ಟರಲ್ ಸಮಿತಿ ಮುಂದೆ ಹಾಜರಾಗಬೇಕಾದ ವಿದ್ಯಾರ್ಥಿಗಳು (05) ಸೇರಿ ಒಟ್ಟು 118 ವಿದ್ಯಾರ್ಥಿಗಳು.
ಪತ್ರಿಕಾಗೋಷ್ಠಿಯಲ್ಲಿ ಕೆಎಸ್ ಒಯು ಕುಲಸಚಿವ ಪ್ರೊ.ರಮೇಶ್ ಉಪಸ್ಥಿತರಿದ್ದರು.
Key words: KSOU has provided another golden opportunity to students for 2011-12 and 2012-13..
#KSOU #student #another #opportunity #ChancellorProf.DShivalingaiah