ಮೈಸೂರು,ಫೆಬ್ರವರಿ,7,2022(www.justkannada.in): ಮುಕ್ತ ವಿವಿಯಲ್ಲಿ ಸುಮಾರು 250 ಕೋಟಿ ರು.ಅಕ್ರಮ ನಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡುವಂತೆ ಶನಿವಾರ ನಡೆದ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಒತ್ತಾಯಿಸಿರುವುದಾಗಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಿಳಿಸಿದ್ದಾರೆ.
ಇದಕ್ಕೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸಹಮತ ವ್ಯಕ್ತಪಡಿಸಿದರು ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ರಚನೆಯಲ್ಲಿ ತಮ್ಮದೂ ಪಾತ್ರವಿದೆ. ಎಂ.ವೀರಪ್ಪ ಮೊಯ್ಲಿ ಅವರ ಸರ್ಕಾರದಲ್ಲಿ ಎಸ್.ಎ೦.ಯಾಹ್ಯಾ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ರಚಿಸಿದ್ದ ಉಪಸಮಿತಿಯಲ್ಲಿ ನಾನು ಕೂಡ ಸದಸ್ಯನಾಗಿದ್ದೇನೆ. ಗ್ರಾಮೀಣ ಪ್ರದೇಶದವರಿಗೆ ಉನ್ನತ ಶಿಕ್ಷಣ ಕೈಗೆಟಕುತ್ತಿರಲಿಲ್ಲ.
ಹೀಗಾಗಿ ಮನೆಯಲ್ಲಿದ್ದುಕೊಂಡೇ ಪದವಿ, ಸ್ನಾತಕೋತ್ತರ ಪದವಿ ಪಡೆಯಲಿ ಎಂದು ನಾವು ಕೊಲ್ಕತ್ತಾದ ಶಾಂತಿನಿಕೇತನ, ದೆಹಲಿಯ ಇಗ್ನೋ ಮೊದಲಾದ ಕಡೆ ಭೇಟಿ ನೀಡಿ, ಅಧ್ಯಯನ ಮಾಡಿ, ಅಂತಿಮವಾಗಿ ಇಗ್ನೋ ಮಾದರಿ ಅಳವಡಿಸಿಕೊಂಡಿವೆ. ಹೀಗಾಗಿ ಮುಕ್ತ ವಿವಿ ಇಡೀ ದೇಶದಲ್ಲಿಯೇ ಪ್ರತಿಷ್ಟಿತ ವಿವಿಯಾಗಿ ಬೆಳೆಯಬೇಕಿತ್ತು. ಆದರೆ, ಈಗ ಯಾರ್ಯಾರೋ ಮಾಡಿದ ತಪ್ಪಿಗೆ ವಿವಿ ಬಾಗಿಲು ಹಾಕುವ ಹಂತಕ್ಕೆ ತಲುಪಿದೆ ಎ೦ದು ವಿಷಾದಿಸಿದರು. ಮುಕ್ತ ವಿವಿಯಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚಿಸಲಾಗಿದೆ. ನ೦ತರ ನಾನೇ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ. ರಾಜ್ಯಪಾಲರ ಗಮನಕ್ಕೂ ತಂದು ಸಿಬಿಐ ತನಿಖೆ ನಡೆಸಬೇಕಾಗಿದೆ ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
Key words: KSOU-MLC-H.Vishwanath
ENGLISH SUMMARY…
Rs.250 crore scam in KSOU: MLC H. Vishwanath demands for CBI probe
Mysuru, February 7, 2022 (www.justkannada.in): MLC H. Vishwanath has alleged that an Rs.250 crore scam has taken place in the Karnataka State Open University (KSOU), and has demanded the State Government recommend a CBI probe.
Chamaraja MLA L. Nagendra and MLC Puttanna have expressed their support for the allegation. “We have also contributed to the formation of KSOU. I was a member of the sub-committee when M. Veerappa Moily was the Chief Minister and S.M. Yahya was the Higher Education Minister. The distance education was not reaching the rural people then,” he explained.
“The KSOU was established to help students to get a degree and PG degrees by studying at home. The curriculum and teaching methods of KSOU were formed after a thorough examination of other systems followed at the Shantiniketan, Kolkatta, IGNOU, Delhi, etc. KSOU should have grown into a reputed institution. But, unfortunately, it has reached a stage of closure because of the fault of some people. Instructions have been given to write a letter to the government through the KSOU. I will personally speak to the Chief Minister. I will also bring this to the notice of the Governor. A CBI inquiry is needed,” he added.
Keywords: KSOU/ Rs.250 crore sacm/ MLC H. Vishwanath