KSOU ನೋಟಿನ ತೋರಣ : ಪ್ರಾಥಮಿಕ ತನಿಖಾ ವರದಿ ನೀಡಲು ಡಾ. ಎನ್. ಆರ್ ನಿರಂಜನ್ ಅವರಿಗೆ ಸೂಚನೆ.

KSOU: protest against Registrar corruption, government asks Dr. N.R. Niranjan to give first information report.

ಬೆಂಗಳೂರು, ಮಾ.೨೧,೨೦೨೫: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರ ಬಾಗಿಲಿಗೆ ಹಣದ ತೋರಣ ಕಟ್ಟಿ ಬೋಧಕೇತರ ಸಿಬ್ಬಂದಿ ವರ್ಗ ಪ್ರತಿಭಟನೆ ನಡೆಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ಸದರಿ ಪ್ರಕರಣದ ಕುರಿತು ಪ್ರಾಥಮಿಕ ತನಿಖಾ ವರದಿಯನ್ನುನೀಡುವಂತೆ ಸೂಚಿಸಿದೆ.

ಕರ್ನಾಟಕ ವಿಧಾನ ಸಭೆ ಸದಸ್ಯ ಆರ್. ಅಶೋಕ್,  ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ಸೂಚನೆಗೆ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್‌  ಉತ್ತರಿಸಿದರು.

ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಿನ ಖಾಯಂ ನೌಕರರು ಕುಲಸಚಿವರ ಕಚೇರಿಯ ಬಾಗಿಲಿಗೆ ಹಣದ ಹಾರ ಹಾಕಿ ಪ್ರತಿಭಟಿಸುತ್ತಿದ್ದಾರೆ. ಕುಲಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡಬೇಕೆಂದು ಕೋರುತ್ತೇನೆ ಎಂದು ಆರ್. ಅಶೋಕ್‌ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಸುಧಾಕರ್‌,  ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ) ಇವರು ವಿಶ್ವವಿದ್ಯಾಲಯದ ಸಿಬ್ಬಂದಿಗಳ ನೇಮಕಾತಿ, ವರ್ಗಾವಣೆ ಹಾಗೂ ಪದನಾಮ ಬದಲಾವಣೆಯಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಂದಲೇ ಲಂಚದ ಬೇಡಿಕೆ ಇಟ್ಟು, ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಿಶ್ವವಿದ್ಯಾಲಯದ ನೌಕರರ ಸಂಘ ಕುಲಸಚಿವರ (ಆಡಳಿತ) ಕಛೇರಿ ಬಾಗಿಲಿಗೆ ನೋಟಿನ ತೋರಣ ಕಟ್ಟಿ ದಿನಾಂಕ: 18.03.2025ರಂದು ಪ್ರತಿಭಟನೆ ನಡೆಸಿರುವುದು ಮಾಧ್ಯಮಗಳ ಮೂಲಕ ಸರ್ಕಾರದ ಗಮನಕ್ಕೆ ಬಂದಿದೆ.

ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ವಿಶ್ವವಿದ್ಯಾಲಯದ ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ  ಡಾ. ಎನ್. ಆರ್ ನಿರಂಜನ್ ಅವರಿಗೆ ಸೂಚಿಸಿದೆ. ಇವರಿಗೆ ಖುದ್ದು ಕೆಎಸ್‌ ಒಯುಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಚರ್ಚಿಸಿ, ಸಮಗ್ರ ಮಾಹಿತಿ ಸಂಗ್ರಹಿಸಿ ಸದರಿ ಪ್ರಕರಣದ ಕುರಿತು ಪ್ರಾಥಮಿಕ ತನಿಖಾ ವರದಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಲಾಗಿದೆ.  ಸದರಿ ವರದಿಯನ್ನು ಪಡೆದ ನಂತರ ನಿಯಮಾನುಸಾರ ಪರಿಶೀಲಿಸಿ ಇಲಾಖೆಯ ಹಂತದಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ಸಚಿವರು ಸದನದಲ್ಲಿ ಉತ್ತರಿಸಿದರು.

KEY WORDS: KSOU, protest, Registrar corruption,  Dr.N.R.Niranjan

SUMMARY: 

KSOU: protest against Registrar corruption, government asks Dr. N.R. Niranjan to give first information report.

Taking a serious note of the incident in which non-teaching staff staged a protest at the door of the Registrar of Karnataka State Open University (KSOU) by tying money toranas, the state government has asked for a preliminary inquiry report on the matter.