ಕೆಎಸ್ಒಯು ನೂತನ ಕುಲಸಚಿವರಾಗಿ ಪ್ರೊ.ಲಿಂಗರಾಜಗಾಂಧಿ ಅಧಿಕಾರ ಸ್ವೀಕಾರ

 

ಮೈಸೂರು, ಜ.22, 2020 : (www.justkannada.in news ) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಸಚಿವರಾಗಿ ಪ್ರೊ.ಲಿಂಗರಾಜಗಾಂಧಿ ಬುಧವಾರ ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ಕುಲಸಚಿವ ರಮೇಶ್, ನೂತನ ರಿಜಿಸ್ಟ್ರಾರ್ ಪ್ರೊ.ಲಿಂಗರಾಜಗಾಂಧಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಕೆಎಸ್ಒಯು ಕುಲಪತಿ ಪ್ರೊ. ವಿದ್ಯಾಶಂಕರ್ ಹಾಜರಿದ್ದರು.
ಮೈಸೂರು ವಿವಿ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ಲಿಂಗರಾಜಗಾಂಧಿ 2019 ರ ಫೆ.20 ರಿಂದ ಸೆ.7 ರ ವರೆಗೆ ಮೈಸೂರು ವಿವಿ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ 2017-19 ರ ಅವಧಿಯಲ್ಲಿ ಬೆಂಗಳೂರು ಕೇಂದ್ರ ವಿವಿಗೆ ಪರೀಕ್ಷಾಂಗ ಕುಲಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ ವಿವಿಯಲ್ಲಿ ಇ-ಆಡಳಿತ ವ್ಯವಸ್ಥೆ ಜಾರಿಗೊಳಿಸಿ ‘ ಪರೀಕ್ಷಾ ಕೈಪಿಡಿ-2018’ (Examinatiion Manual-2018) ಪದ್ಧತಿ ಅಳವಡಿಸಿದ್ದರು.

ನಿರ್ವಹಿಸಿದ ಇತರೆ ಜವಾಬ್ದಾರಿಗಳು :
ಮೈಸೂರು ವಿವಿಯ PMEB ನಿರ್ದೇಶಕರಾಗಿ 2016-17, ಯುಜಿಸಿ ಹ್ಯೂಮನ್ ರಿಸೋರ್ಸ್ ಡೆವಲಪ್ಮೆಂಟ್ ಸೆಂಟರ್ ನ ನಿರ್ದೇಶಕರಾಗಿ 2012-2016, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿ 2011-16, RUSA ನೋಡಲ್ ಅಧಿಕಾರಿಯಾಗಿ 2016-17 ಸೇವೆ ಸಲ್ಲಿಸಿದ್ದರು.
ಇದೀಗ ಪ್ರೊ.ಲಿಂಗರಾಜಗಾಂಧಿ ಅವರನ್ನ KSOU ರಿಜಿಸ್ಟ್ರಾರ್ ಆಗಿ ನೇಮಕ ಮಾಡಿ ರಾಜ್ಯಪಾಲ ವಜುಬಾಯಿವಾಲ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮುಕ್ತವಿವಿ ಕುಲಸಚಿವರಾಗಿ ಪ್ರೊ.ಗಾಂಧಿ ಅಧಿಕಾರ ಸ್ವೀಕರಿಸಿದರು.

key words : KSOU-Registrar-prof.lingaraja.gandhi-mysore-university