ಮೈಸೂರು,ಮೇ,17,2024 (www.justkannada.in): ಶೈಕ್ಷಣಿಕ ಕಾರ್ಯಕ್ರಮಗಳ ಅಭಿವೃದ್ಧಿ ಉತ್ತೇಜಿಸುವ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯವು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯ ಜೊತೆ ಒಡಂಬಡಿಕೆ ಮಾಡಿಕೊಳ್ಳುತ್ತಿದೆ ಎಂದು ಕೆಎಸ್ ಒಯು ಕುಲಪತಿ ಶರಣಪ್ಪ ವಿ ಹಲಸೆ ಮಾಹಿತಿ ನೀಡಿದರು.
ಕೆಎಸ್ಒಯು ನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶರಣಪ್ಪ ವಿ ಹಲಸೆ, ಕೆಎಸ್ಒಯು ಮತ್ತು ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯ ಜೊತೆ ಒಡಂಬಡಿಕೆ ಮಾಡಿಕೊಳ್ಳುತ್ತಿದೆ. ಈ ಪಾಲುದಾರಿಕೆ ಶೈಕ್ಷಣಿಕ ಕಾರ್ಯಕ್ರಮಗಳ ಅಭಿವೃದ್ಧಿ ಉತ್ತೇಜಿಸುವ ಗುರಿ ಹೊಂದಿದೆ. ಈ ಒಡಂಬಡಿಕೆಯಿಂದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ವಿನಿಮಯ ಸುಲಭಗೊಳ್ಳುತ್ತದೆ. ಈಗಾಗಲೇ 13 ಕೋರ್ಸ್ ಗಳನ್ನ ತೆರೆಯಲಾಗಿದ್ದು, 17 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಜವಾಹರಲಾಲ್ ನೆಹರು ವಿಶ್ವ ವಿದ್ಯಾನಿಲಯ ಜೊತೆ ಕೆಎಸ್ಒಯು ಒಡಂಬಡಿಕೆ ಮಾಡಿಕೊಳ್ಳುತ್ತಿದೆ. ಜೆಎನ್ ಯು ಕೂಡ ತಾತ್ವಿಕ ಒಪ್ಪಿಗೆ ನೀಡಿದೆ. ಸ್ಪಾನಿಷ್, ಫ್ರೆಂಚ್, ಜರ್ಮನ್ ಭಾಷೆಗಳನ್ನ ಪರಿಚಯಿಸಲಾಗುತ್ತಿದೆ. ಮುಂದಿನ ತಿಂಗಳು ಕೆಎಸ್ ಒಯು ಜೊತೆ ಅಧಿಕೃತ ಒಡಂಬಡಿಕೆಗೆ ಸಹಿ ಹಾಕಲಾಗುವುದು ಎಂದರು.
ಪ್ರತಿಯೊಂದು ವಿವಿಯಿಂದ ಒಡಂಬಡಿಕೆಗೆ ಸರ್ಕಾರ ಉತ್ತೇಜಿಸುತ್ತದೆ ವನ್ನ ಒಡಂಬಡಿಕೆ ಮಾಡಿಕೊಳ್ಳಬೇಕು. ಎಲ್ಲೆಲ್ಲಿ ಸಂಪನ್ಮೂಲ ಇದೆ ಅದನ್ನ ಬಳಸಿಕೊಳ್ಳಬೇಕು ಎನ್ನುತ್ತದೆ. ನಮ್ಮಲ್ಲಿ ಸಂಪನ್ಮೂಲ ಚೆನ್ನಾಗಿ ಉಪಯೋಗವಾಗಬೇಕಾದರೆ ಒಡಂಬಡಿಕೆ ಅಗತ್ಯ. ನಮ್ಮ ಅಧ್ಯಯನ ಕೇಂದ್ರಗಳು ಪ್ರವೇಶಾತಿ ಪಡೆಯುತ್ತೇವೆ ಮತ್ತು ಪರೀಕ್ಷೆಯನ್ನ ಕಂಡಕ್ಟ್ ಮಾಡುತ್ತೇವೆ. ಉಳಿದ ಸಮಯದಲ್ಲಿ ಬೇರೆ ವಿವಿ ವಿದ್ಯಾರ್ಥಿಗಳು ವರ್ಕ್ ಮಾಡಲು ಅವಕಾಶವಿರುತ್ತದೆ. ಹೀಗಾಗಿ ಒಡಂಬಡಿಕೆಗೆ ಮುಂದಾಗಿದ್ದೇವೆ ಎಂದರು.
ಜವಹಾರ್ ಲಾಲ್ ನೆಹರು ವಿವಿ ಜೊತೆಗೂ ನಾವು ಒಡಂಬಡಿಕೆ ಮಾಡಿಕೊಳ್ಳುತ್ತಿದ್ದೇವೆ. ಬೇರೆ ಬೇರೆ ಭಾಷೆಗಳನ್ನ ಬೇರೆ ದೇಶದ ಭಾಷೆಗಳು ನಮ್ಮ ವಿವಿಯಲ್ಲಿ ಯಾರಾದರೂ ಒಡಿಎಲ್ ನಲ್ಲಿ ಅಭ್ಯಾಸ ಮಾಡಬೇಕಾದರೇ ಬೇಕಾಗುತ್ತದೆ ಹೀಗಾಗಿ ಒಡಂಬಡಿಕಗೆಗೆ ಸಹಿ ಹಾಕಲಾಗುತ್ತದೆ ಎಂದರು.
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಪ್ರೊಫೆಸರ್ ನಾಗೇಶ್ ಬೆಟ್ಟಕೋಟೆ ಜೊತೆ ಚರ್ಚಿಸಿದ್ದೇವು. ನಮ್ಮಲ್ಲಿ ಆನೇಕ ಸಂಪನ್ಮೂಲಗಳು ಚೆನ್ನಾಗಿವೆ. ಹೀಗಾಗಿ ನಮ್ಮ ವಿವಿಗೂ ಸಂಪನ್ಮೂಲಗಳು ಉಪಯೋಗವಾಗುತ್ತೆ ಎಂದು ನಾಗೇಶ್ ಬೆಟ್ಟಕೋಟೆ ಹೇಳಿದ್ದಾರೆ . ಹಾಗೆಯೇ ನಮ್ಮ ಕೆಎಸ್ ಒಯುನಲ್ಲಿ ಎಷ್ಟೋ ಕಾರ್ಯಕ್ರಮಗಳು ನಡೆಯುತ್ತವೆ. ಆಗ ವಿದ್ಯಾರ್ಥಿಗಳು ಸಂಗೀತಕ್ಕಾಗಿ ಬೇಕಾಗುತ್ತಾರೆ. ಆ ವಿವಿ ವಿದ್ಯಾರ್ಥಿಗಳು ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತೆ ಎಂದರು.
Key words: KSOU, tie-up, Dr. Gangubai Hanagal University