ಬೆಂಗಳೂರು, ಜೂನ್,3, 2022 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಕುಲಪತಿ ಎಸ್. ವಿದ್ಯಾಶಂಕರ್ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಾನ್ಯ ಉಚ್ಛ ನ್ಯಾಯಾಲಯ ಸೂಚನಾ ಆದೇಶವೊಂದನ್ನು ಹೊರಡಿಸಿದೆ.
ಮೈಸೂರು ವಿಶ್ವವಿದ್ಯಾಲಯದ ಯೋಜನೆ, ನಿಗಾವಣೆ ಹಾಗೂ ಮೌಲ್ಯಮಾಪನ ಮಂಡಳಿಯ ಸದಸ್ಯ ಹಾಗೂ ರಾಜ್ಯ ಒಕ್ಕಲಿಗರ ಸಂಘದ (ಆರ್‌ವಿಎಸ್) ಮಾಜಿ ಪ್ರಧಾನ ಕಾರ್ಯದರ್ಶಿ ಕೆ. ಮಹದೇವ್ (೭೭) ಅವರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ, ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ಜೊತೆಗೆ, ಮೇ 30, 2022ರಿಂದ ಆರಂಭವಾಗುವಂತೆ ಒಂದು ವರ್ಷದ ಕಾಲ ಅಧಿಕಾರಾವಧಿಯನ್ನು ವಿಸ್ತರಿಸಿರುವುದರ ವಿರುದ್ಧ ನ್ಯಾಯಾಲಯ ಸೂಚನಾ ಆದೇಶವನ್ನು ಹೊರಡಿಸಿದೆ.
ಆರ್‌ವಿಎಸ್ ನಡೆಸುತ್ತಿರುವ ಬೆಂಗಳೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಂತಹ ವಿದ್ಯಾಶಂಕರ್ ಅವರನ್ನು, ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಅವರ ಮೇಲೆ ಹಲವು ಭ್ರಷ್ಟಾಚಾರಗಳ ಆರೋಪಗಳಿದ್ದ ಹೊರತಾಗಿಯೂ ಅವರನ್ನು ೨೦೧೯ರಲ್ಲಿ KSOUಗೆ ಕುಲಪತಿಯನ್ನಾಗಿ ನೇಮಕ ಮಾಡಿರುವುದಾಗಿ ಮನವಿಯಲ್ಲಿ ಆರೋಪಿಸಲಾಗಿದೆ.
ಕೆಎಸ್‌ಒಯುನಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿದ್ಯಾಶಂಕರ್ ಅವರು ಹಲವು ಭ್ರಷ್ಟಾಚಾರ ಹಾಗೂ ಕಾನೂನುಬಾಹಿರ ಕೆಲಸಗಳಲ್ಲಿ ತೊಡಗಿರುವ ಆರೋಪಗಳಿವೆ. ಮನವಿದಾರರು ಹಾಗೂ ಇತರೆ ಕೆಲವು ಪ್ರಮುಖರು ಕೆಎಸ್ ಒಯುನಲ್ಲಿ ವಿದ್ಯಾಶಂಕರ್ ಅವರು ನಡೆಸಿರುವ ಹಲವು ಭ್ರಷ್ಟಾಚಾರ ಹಾಗೂ ಕಾನೂನುಬಾಹಿರ ಅಭ್ಯಾಸಗಳ ಕುರಿತು ಹಲವು ಬಾರಿ ದೂರುಗಳನ್ನು ಸಲ್ಲಿಸಿದ್ದರೂ ಸಹ, ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ರಾಜ್ಯ ಸರ್ಕಾರ ಎರಡೂ ಸಹ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿವೆ ಎಂದೂ ಸಹ ಮನವಿಯಲ್ಲಿ ತಿಳಿಸಲಾಗಿದೆ.
ಸರಿಯಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳದೆ ಕುಲಪತಿಗಳ ಅಧಿಕಾರಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸುದ್ದಿ ಮೂಲ: ದಿ ಹಿಂದೂ
Key words: KSOU –VC- Extension: High Court-Question – Government