ಮೈಸೂರು, ಜು.13, 2021 : (www.justkannada.in news ) ಕರೋನಾ ಪೆಂಡಮಿಕ್ ಸಮಯದಲ್ಲೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳು ದಾಖಲೆ ಪ್ರಮಾಣದಲ್ಲಿ ಸೇರ್ಪಡೆಗೊಂಡಿದ್ದಾರೆ. ಕಳೆದ ಸಾಲಿಗಿಂತ ಶೇ.110 ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಮೂಲಕ ಮುಕ್ತ ವಿವಿ ಹೊಸ ‘ಚಿನ್ನದ’ ದಾಖಲೆ ಬರೆದಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಸ್ಥಾಪನೆಯಾಗಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯವು ನಡೆದು ಬಂದ ದಾರಿಯ ಹೆಜ್ಜೆಗುರುತು ಹಾಗೂ ವಿಶ್ವವಿದ್ಯಾನಿಲಯದ ಉನ್ನತಿಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಮಂಗಳವಾರ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾಹಿತಿ ನೀಡಿದರು.
ಪ್ರಮುಖವಾಗಿ ಕರೋನಾ ಕಾರಣದಿಂದ ರಾಜ್ಯದ ಬಹುತೇಕ ವಿವಿಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆಗೊಂಡಿದೆ. ಆದರೆ ಆಶ್ಚರ್ಯಕರ ಸಂಗತಿ, ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಮಾತ್ರ, ಜುಲೈ ಮತ್ತು ಜನವರಿ ಸೈಕಲ್ ನಲ್ಲಿ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮುಕ್ತ ವಿವಿಗೆ ಪ್ರವೇಶಾತಿ ಪಡೆದಿದ್ದಾರೆ. ಕಳೆದ ಸಾಲಿಗೆ ಹೋಲಿಸಿದಾಗ ಶೇ.110 ರಷ್ಟು ವಿದ್ಯಾರ್ಥಿಗಳ ದಾಖಲೆ ಹೆಚ್ಚಾಗಿದೆ ಎಂದು ಕುಲಪತಿ ಪ್ರೊ.ವಿದ್ಯಾಶಂಕರ್ ಹರ್ಷ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನಿಂದಲೇ ಎಂಬಿಎ ಕೋರ್ಸ್ ಆರಂಭಕ್ಕೂ ಮುಕ್ತ ವಿವಿ ಸಿದ್ಧತೆ ನಡೆಸಿದೆ. ಈ ಸಂಬಂಧ ಎಐಸಿಟಿ ಅನುಮೋದನೆಗೆ ಕಾಯಲಾಗುತ್ತಿದೆ. ಸದ್ಯದಲ್ಲೇ ಇದು ಲಭಿಸುವ ನಿರೀಕ್ಷೆಯಿದೆ ಎಂದು ಕುಲಪತಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ಆನ್ ಲೈನ್ ಕೋರ್ಸ್ ಗಳ ಆರಂಭಕ್ಕೆ ಕೋರಿ ಮುಕ್ತ ವಿವಿ ಸಲ್ಲಿಸಿದ್ದ ಮನವಿಗೆ ಯುಜಿಸಿ ಹಸಿರುನಿಶಾನೆ ತೋರಿಸಿದೆ. ಪರಿಣಾಮ ಹೊಸ 11 ಆನ್ ಲೈನ್ ಕೋರ್ಸ್ ಗಳು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಗೊಳ್ಳುವ ಭರವಸೆ ನೀಡಿದರು.
ಈ ಪೈಕಿ ಎಂಎಸ್ಸಿ (ಸಸ್ಯಶಾಸ್ತ್ರ), ಎಂ.ಎಸ್ಸಿ (ಪ್ರಾಣಿಶಾಸ್ತ್ರ), ಎಂಎಸ್ಸಿ (ಫುಟ್ ಅಂಡ್ ನ್ಯೂಟ್ರಿಷನ್ ), ಎಂಎಸ್ಸಿ (ಇನ್ಫಾರ್ಮೇಷನ್ ಟೆಕ್ನಾಲಜಿ), ಬಿಎಸ್ಸಿ (ಜನರಲ್), ಬಿಎಸ್ಸಿ (ಇನ್ಫಾರ್ಮೆಷನ್ ಟೆಕ್ನಾಲಜಿ), ಬಿಎಸ್ಸಿ (ಹೋಂ-ಸೈನ್ಸ್ ), ಬಿಬಿಎ, ಬಿಸಿಎ, ಎಂಎ (ಶಿಕ್ಷಣ), ಎಂಎ (ತೆಲುಗು) ಕೋರ್ಸ್ ಗಳ ಆರಂಭಕ್ಕೆ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಪತ್ರಿಕಾಗೋಷ್ಠಿಯಲ್ಲಿ ಒಟ್ಟಾರೆ ಹೇಳಿದಿಷ್ಟು…
ಮುಕ್ತ ಹಾಗೂ ದೂರಶಿಕ್ಷಣವನ್ನು ನಡೆಸುವ ರಾಜ್ಯದ ಏಕಮಾತ್ರ ವಿಶ್ವವಿದ್ಯಾನಿಲಯ – ಕೆ.ಎಸ್.ಒ.ಯು. ಆಕ್ಟ್ ಗೆ ತಿದ್ದುಪಡಿ (Gazettee Notification on 30-12-2020).
ದೂರಶಿಕ್ಷಣದ ಏಕಮಾತ್ರ ವಿಶ್ವವಿದ್ಯಾನಿಲಯದ ಮಹತ್ವ – ಸ್ಥಾಪಿತ ಉದ್ದೇಶ, ಎಲ್ಲರಿಗೂ ಎಲ್ಲೆಡೆ ಶಿಕ್ಷಣ ಇದಕ್ಕೆ ಪೂರಕವಾಗಿ Gross Enrolment Ratio (GER) ಗಣನೀಯ ಹೆಚ್ಚಳ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು. ತಂತ್ರಜ್ಞಾನ ಆಧಾರಿತ ಹೊಸ ಶಿಕ್ಷಣ ನೀತಿ.
ಬೆಳ್ಳಿ ಹಬ್ಬ ಆಚರಣೆ –
ಕ್ರಿಯಾ ಯೋಜನೆ, ಉನ್ನತ ಮಟ್ಟದ ಸಮಿತಿ ರಚನೆ, ಹೊಸ ಕಾರ್ಯಕ್ರಮಗಳ ಪರಿಚಯ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಪೂರಕವಾದ ಎಲ್ಲಾ ಶೈಕ್ಷಣಿಕ ಸೌಲಭ್ಯವುಳ್ಳ 24 x 7 ಕಾರ್ಯನಿರ್ವಹಿಸುವ ಗ್ರಂಥಾಲಯದ ವಸತಿ ಸೌಲಭ್ಯವುಳ್ಳ ಕಟ್ಟಡದ ನಿರ್ಮಾಣದ ಯೋಜನೆ.
ಕ.ರಾ.ಮು.ವಿಯ ಅಧಿಕೃತ ಜಾಲತಾಣವನ್ನು ವಿದ್ಯಾರ್ಥಿ ಸ್ನೇಹಿಯಾಗಿ ಅಭಿವೃದ್ಧಿಗೊಳಿಸಲಾಗಿದೆ. 5. ಸರ್ಕಾರದೊಡನೆ / ಯು.ಜಿ.ಸಿ.ಯೊಡನೆ ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಆನ್ ಲೈನ್ ಮುಖಾಂತರ ಸಭೆ ಹಾಗೂ ಸಂವಾದ ನಡೆಸಲು Video Conference System ಅನ್ನು ಅಳವಡಿಸಲಾಗಿದೆ.
ಪ್ರವೇಶಾತಿಗೆ ಸಂಬಂಧಪಟ್ಟಂತೆ, ಗಣಕೀಕರಣ ಗೊಳಿಸಲಾಗಿದೆ.
ಹೊಸ ಆವಿಷ್ಕಾರಗಳು – ಪ್ರವೇಶಾತಿ ಪ್ರಕ್ರಿಯೆಯಿಂದ ಪರೀಕ್ಷಾ ಫಲಿತಾಂಶ ದವರೆಗೆ ಗಣಕೀಕರಣ, ಆನ್‌ಲೈನ್ ತರಗತಿಗಳು, Digital Initiatives – KSOU Student App, KSOU Connect etc..
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಒತ್ತು ನೀಡುವ ಸಲುವಾಗಿ IAS, KAS ಮತ್ತು Banking Exam ಕಾರ್ಯಕ್ರಮಗಳ ತರಬೇತಿಯನ್ನು Online ಮುಖಾಂತರ ನೀಡಲಾಗುತ್ತಿದೆ.
ದಿನಾಂಕ : 06.09.2019 ಮತ್ತು 07.09.2019ರಂದು ನಡೆದ ಅಖಿಲ ಭಾರತ ಮುಕ್ತ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸಮ್ಮೇಳನದಲ್ಲಿ “21ನೆಯ ಶತಮಾನದಲ್ಲಿ ಮುಕ್ತ ವಿಶ್ವವಿದ್ಯಾನಿಲಯಗಳ ಪಾತ್ರ “ಎಂಬ ವಿಷಯದ ಬಗ್ಗೆ ಸುಧೀರ್ಘ ಚರ್ಚೆ ನಡೆದು ಸಮ್ಮೇಳನವು ಯಶಸ್ವಿಯಾಗಿ ನಡೆದಿರುತ್ತದೆ.
U.G. P.G ಕಾರ್ಯಕ್ರಮದ ಜೊತೆಗೆ ಪಿ.ಎಚ್‌ಡಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ವಿಶ್ವವಿದ್ಯಾನಿಲಯದಲ್ಲಿ ಈಗಾಗಲೇ 09 ಪೀಠಗಳು ಕಾರ್ಯಾರಂಭ ಮಾಡುತ್ತಿದ್ದು, ಹೊಸದಾಗಿ 04 ಪೀಠಗಳ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ.
ಕ.ರಾ.ಮು.ವಿವಿ ಯಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದ 20 ವಿದ್ಯಾರ್ಥಿಗಳು ಕರ್ನಾಟಕ ಲೋಕ ಸೇವಾ ಆಯೋಗ (ಕೆ.ಪಿ.ಎಸ್.ಸಿ) ನಡೆಸಿದ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಕೆ.ಎ.ಎಸ್. ಅಧಿಕಾರಿಗಳಾಗಿ ಆಯ್ಕೆಯಾಗಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿಹಿಸುತ್ತಿದ್ದಾರೆ.
ಸಿ.ಎ.ಎಸ್, ಸಿಮ್‌ನಡಿ ಅಧ್ಯಾಪಕರುಗಳಿಗೆ ಪದೊಭ್ಯಥಿ 08 ವರ್ಷಗಳಿಂದ ನೆನೆಗುದಿಗೆ ಅಲ್ಲಿದ್ದ ಅಧ್ಯಾಪಕರುಗಳಿಗೆ ಪದೋನ್ನತಿ ನೀಡಲಾಗಿದೆ. ವಿವಿಧ ಹುದ್ದೆಯಲ್ಲಿರುವ ಅಧ್ಯಾಪಕೇತರ ನೌಕರರುಗಳಿಗೆ ಪದೋನ್ನತಿ ಪ್ರಕ್ರಿಯೆ ಅಂತಿಮ ಹಂತದಲ್ಲದೆ. 24. CIQA – Centre for Internal Quality Assurance sacerdogfrisoad
UGC, ನವ ದೆಹಲಿಯಿಂದ ವಿವಿಗೆ 12 (B) ಮಾನ್ಯತೆ ಲಭಿಸಿದೆ.
ಸರ್ಕಾರದ ನಿರ್ದೇಶನದಂತೆ, ಕ.ರಾ.ಮುವಿವಿ ವತಿಯಿಂದ ಸರ್ಕಾರದ ಕೆಲವು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಬಿ.ಎಡ್., ಪ್ರವೇಶಾತಿಯನ್ನು ಸಂಪೂರ್ಣ ಗಣಕೀಕೃತ ಗೊಳಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಅನ್ ಲೈನ್ ಮೂಲಕವೇ ತಮ್ಮ ದಾಖಲಾತಿಗಳನ್ನು ಪರಿಶೀಲಿಸಿಕೊಂಡು ಪ್ರವೇಶಾತಿ ಪಡೆದಿರುತ್ತಾರೆ.
ಯು.ಜಿಸಿ ಯಿಂದ ಈಗಾಗಲೆ 2018-19 ರಿಂದ 2022-23 ರವರೆಗೆ ಮಾನ್ಯತೆ ನೀಡಿದ್ದು, ಮುಂದಿನ ಅವಧಿಯ ಮಾನ್ಯತೆ ನವೀಕರಣಕ್ಕೆ ನ್ಯಾಕ್ ಮಾನ್ಯತೆ ಅತ್ಯವಶ್ಯಕ. ಈ ಸಂಬಂಧ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಯು.ಜಿ.ಸಿ.ನವದೆಹಲ ಯಿಂದ ದೂರಶಿಕ್ಷಣವನ್ನು ಬಲಪಡಿಸುವ ಸಲುವಾಗಿ ನಮ್ಮ ವಿವಿಗೆ ಎರಡು ಕಂತುಗಳಲ್ಲಿ ರೂ.1,00,00,000/- ಮತ್ತು ರೂ.16,66,666/- ಒಟ್ಟು ಮೊತ್ತ ರೂ.116,56,666/- ಅನುದಾನ ನೀಡಲಾಗಿರುತ್ತದೆ.
ವಿಶ್ವವಿದ್ಯಾನಿಲಯದ ಎಲ್ಲಾ ಬೋಧಕ ವರ್ಗದವರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಸಲುವಾಗಿ ಅವರ ಮನವಿ ಆಧರಿಸಿ LAP TOP ಮತ್ತು Writing Pads ಗಳನ್ನು ವಿತರಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಪರೀಕ್ಷಾಂಗ ಕುಲಸಚಿವ ಡಾ.ಮಹಾದೇವನ್, ಹಣಕಾಸು ಅಧಿಕಾರಿ ಡಾ. ಎ.ಖಾದರ್ ಪಾಷ, ಡೀನ್ ಗಳಾದ ಡಾ. ಅಶೋಕ್ ಕಾಂಬ್ಳೆ, ಡಾ. ಷಣ್ಮುಖ ಹಾಗೂ ಇತರರು ಹಾಜರಿದ್ದರು.
0000———0000——–
key words : KSOU-VC-vidya.shankar-press.meet-silver jubilee-celebration-admission