EXCLUSIVE : ಹೈಟೆಕ್ ಸ್ಟುಡಿಯೋ @ KSOU , ಸದ್ಯದಲ್ಲೇ ‘YOU TUBE ‘ ನಲ್ಲಿ ಪಠ್ಯ ಲಭ್ಯ.

 

ಮೈಸೂರು, ಜು.13, 2021 : (www.justkannada.in news) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹೈಟೆಕ್ ದೃಶ್ಯ-ಶ್ರವ್ಯ ಸ್ಟುಡಿಯೋ ( Audio-Visual Studio) ನಿರ್ಮಾಣವಾಗುತ್ತಿದ್ದು, ಸದ್ಯದಲ್ಲೇ ಇದು ಕಾರ್ಯರಂಭ ಮಾಡಲಿದೆ.

ಈಗಾಗಲೇ ಪ್ರತ್ಯೇಕವಾಗಿ ‘ಆಡಿಯೋ’ ಮುಖಾಂತರ ಅಧ್ಯಾಪಕರು ಪಾಠಗಳನ್ನು ಶೋಧನೆ ಮಾಡುತ್ತಿದ್ದಾರೆ, ಇನ್ನು ಹೆಚ್ಚು ಪಲಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ವೀಡಿಯೋ ಸ್ಟುಡಿಯೋವನ್ನು ನವೀಕರಣಗೊಳಿಸಲಾಗುತ್ತಿದೆ.
ಈ ಬಗ್ಗೆ ‘ ಜಸ್ಟ್ ಕನ್ನಡ’ ಜತೆ ಮಾತನಾಡಿದ ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹೇಳಿದಿಷ್ಟು..

jk

ಮುಕ್ತ ವಿವಿ ಆವರಣದ ಕಾವೇರಿ ಭವನದಲ್ಲಿ ಈಗಾಗಲೇ ಹೈಟೆಕ್ ಸ್ಟುಡಿಯೋ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ವಾರದಲ್ಲಿ ಇದು ಪೂರ್ಣಗೊಳ್ಳಲಿದೆ. ತಾಂತ್ರಿಕ ಅಂಶಗಳು ಪೂರ್ಣಗೊಂಡ ಬಳಿಕ ಉನ್ನತ ಶಿಕ್ಷಣ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರನ್ನು ಆಹ್ವಾನಿಸಿ ಈ ಸ್ಟುಡಿಯೋ ಉದ್ಘಾಟಿಸಲಾಗುವುದು ಎಂದರು.

ಆನ್ ಲೈನ್ ಶಿಕ್ಷಣದ ಮೂಲಕ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಲು ಮುಕ್ತ ವಿವಿ ಮುಂದಾಗಿದೆ. ಇದಕ್ಕಾಗಿಯೇ ಈ ಮೂಲ ಸವಲತ್ತುಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದು ಪೂರ್ಣಗೊಂಡ ಬಳಿಕ, ವಿವಿಧ ವಿಷಯಗಳ ತಜ್ಞರನ್ನು ಆಹ್ವಾನಿಸಿ ಅವರಿಂದ ಪಾಠಗಳನ್ನು ರೆಕಾರ್ಡ್ ಮಾಡಿಸಿ ಅದನ್ನು ಯೂ ಟ್ಯೂಬ್ ಮೂಲಕ ವಿದ್ಯಾರ್ಥಿಗಳ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತದೆ. ಆ ಮೂಲಕ ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿ ಸಹ ಉತ್ತಮ ಶಿಕ್ಷಕ ವೃಂದ ಪಾಠ, ಪ್ರವಚನವನ್ನು ತನ್ನೂರಲ್ಲಿ ಕುಳಿತೆ ವೀಕ್ಷಿಸಿ ಅಭ್ಯಾಸಿಸಬಹುದು ಎಂದು ಹೇಳಿದರು.

ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಕೋಡಿಕೃತ ಅಂಕಿಅಂಶಗಳನ್ನು ಶೇಖರಿಸಲು DATA Centre ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ಜತೆಗೆ ಸರ್ಕಾರದ ನಿರ್ದೇಶನದಂತೆ ವಿವಿಯ ಕಡತ ಮತ್ತು ಪತ್ರಗಳ ನಿರ್ವಹಣೆಯನ್ನು ಸಂಪೂರ್ಣ E- Office ಮುಖಾಂತರ ಕಾರ್ಯನಿರ್ವಹಿಸಲಾಗುತ್ತಿದೆ. ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಲಾಗಿದೆ.
ವಿವಿಯ ಕ್ಯಾಂಪಸ್‌ನಲ್ಲಿ ಇಂಟರ್ ನೆಟ್ ಸೌಲಭ್ಯವನ್ನು Wi-Fi ಮುಖಾಂತರ ನೀಡಲು ಕ್ರಮವಹಿಸಲಾಗುತ್ತಿದೆ. ಈಗಾಗಲೇ ಈ ಸಂಬಂಧ ಬಿಎಸ್ಎನ್ಎಲ್ ಜತೆ ಒಡಂಬಡಿ ಮಾಡಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ವಿದ್ಯಾಶಂಕರ್ ಮಾಹಿತಿ ನೀಡಿದರು.

 

key words : KSOU-YOUTUBE-channel-audio-visual-studio-mysore-vc