ಬೆಂಗಳೂರು,ಫೆಬ್ರವರಿ,2,2021(www.justkannada.in): ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ನೌಕರರು ಮತ್ತೆ ಪ್ರತಿಭಟನೆಯ ಬೆದರಿಕೆ ಹಾಕಿದ್ದಾರೆ. ಸರ್ಕಾರ ನೀಡಿದ್ದ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಡಿಸೆಂಬರ್ ನಲ್ಲಿ ನೀಡಿದ್ದ ಭರವಸೆ ಸರ್ಕಾರ ಈಡೇರಿಸಿಲ್ಲ. ಈವರೆಗೆ ಸರ್ಕಾರ ಯಾವುದೇ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಜತೆಗೆ ಸರ್ಕಾರಕ್ಕೆ ಮಾರ್ಚ್ 14ರವರೆಗೆ ಸಮಯ ನೀಡಲಾಗುತ್ತದೆ. ಸಾರ್ವಜನಿಕ ಲಿಖಿತ ಉತ್ತರ ನೀಡಬೇಕು. 9 ಬೇಡಿಕೆಗಳನ್ನ ಈಡೇರಿಸಬೇಕು. ಇಲ್ಲದಿದ್ದರೇ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಡೆಡ್ ಲೈನ್ ನೀಡಿದ್ದಾರೆ.
Key words: KSRTC- BMTC- employees –protest-Kodihalli Chandrashekhar – deadline – government.