ಬೆಂಗಳೂರು, ಮಾರ್ಚ್,28,2024 (www.justkannada.in): ಕೆಎಸ್ ಆರ್ ಟಿಸಿ ಬಸ್ ಚಾಲಕರು ಸಿಹಿಸುದ್ದಿ ಸಿಕ್ಕಿದ್ದು, ಚಾಲಕರ ಡಬಲ್ ಡ್ಯೂಟಿಗೆ ಕೆಎಸ್ ಆರ್ ಟಿಸಿ ಬ್ರೇಕ್ ಹಾಕಿದೆ.
ಹೌದು, ಹೆಚ್ಚುವರಿ ಡ್ಯೂಟಿ ಮತ್ತು ವಿಶ್ರಾಂತಿ ಇಲ್ಲದೇ ಇರುವುದರಿಂದ ಅಪಘಾತ ಪ್ರಕರಣಗಳು ನಡೆಯುತ್ತಿದ್ದವು. ಹೀಗಾಗಿ ಕೆಎಸ್ಆರ್ಟಿಸಿ, ಬಸ್ ಚಾಲಕರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ನೀಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಅಲ್ಲದೆ ರಾತ್ರಿ ವೇಳೆ ದೂರದ ಪ್ರಯಾಣದಲ್ಲಿ ವಿಶ್ರಾಂತಿ ಪಡೆಯುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.
ರಾತ್ರಿ ಮತ್ತು ದೂರದ ಪ್ರಯಾಣದ ನಂತರ ಚಾಲಕರು ವಿಶ್ರಾಂತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. 8 ಗಂಟೆಗಳಿಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ. 8 ಗಂಟೆಗಿಂತ ಅಧಿಕ ಮತ್ತು ರಾತ್ರಿ ವೇಳೆ ಹೆಚ್ಚುವರಿ ಡ್ಯೂಟಿ ಮಾಡಿದರೆ ನಾಲ್ಕೈದು ಗಂಟೆಗಳ ಕಾಲ ವಿಶ್ರಾಂತಿಗೆ ಅವಕಾಶ ನೀಡಬೇಕು. ವಾರದಲ್ಲಿ ಕೆಲಸದ ಅವಧಿ 48 ಗಂಟೆ ದಾಟುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
Key words: KSRTC, bus, drivers, duty