ನೆಟ್ಟಿಗರ ಟ್ರೋಲಿಗೆ ಗುರಿಯಾದ “ಕುರುಕ್ಷೇತ್ರ” ಪ್ರೋಗ್ರಾಂ..!

Shed Shettar's "Kurukshetra" program targeted by netizens' trolls..!

 

ಮೈಸೂರು, ಸೆ.25,2024 (www.justkannada.in news) ಇತ್ತೀಚೆಗೆ ಸೋಷಿಯಲ್‌ ಮೀಡಿಯಾಗಳು ಅತಿ ಹೆಚ್ಚು ಪ್ರಭಾವಿಯಾಗುತ್ತಿದ್ದು ಮಾಧ್ಯಮಗಳನ್ನು ಅದರಲ್ಲೂ ಎಲೆಕ್ಟ್ರಾನಿಕ್‌ ಮೀಡಿಯಾದವರನ್ನು ಟ್ರೋಲ್‌ ಮಾಡುವ ಪರಿಪಾಟು ಹೆಚ್ಚುತ್ತಿದೆ.

ಖಾಸಗಿ ವಾಹಿನಿಯೊಂದರ ನ್ಯೂಸ್‌ ಆಂಕ್ಯರ್‌ ಬಳಿಸಿ “ ಶೆಡ್ಡಿಗೆ..ಬಾ..” ಡೈಲಾಗ್‌ ಅತೀ ಹೆಚ್ಚು ಬಳಕೆಗೆ ಬಂದಿತ್ತಾದರೂ, ಆ ಪದ ಬಳಕೆಗೆ ಸಾಮಾನ್ಯ ವರ್ಗದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಘನತೆ, ವೃತ್ತಿಪರತೆ ಮೆರೆಯಬೇಕಾಗಿದ್ದ ಮಾಧ್ಯಮಗಳ ಅಧೋಗತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಳವಳ ವ್ಯಕ್ತಪಡಿಸಲಾಗಿತ್ತು. ಕೆಲವಂತೂ ಆಂಕ್ಯರ್‌ ಗಿಂತ ನಾವೇನು ಕಮ್ಮಿ ಎಂಬಂತೆ ಅತಿರೇಕದ ಕಮೆಂಟ್ ಗಳನ್ನು ಮಾಡಿದ್ದರು.

ಇದೀಗ ಅದೇ ವಾಹಿನಿಯೂ ನಟ ದರ್ಶನ್‌ ಅಭಿನಯದ “ಕುರುಕ್ಷೇತ್ರ” ಸಿನಿಮಾ ಉಲ್ಲೇಖಿಸಿ ಈ ಚಿತ್ರದಲ್ಲಿ ನಟಿಸಿರುವ ಕಲಾವಿದರಿಗೆ ಕಂಟಕ ಎಂಬರ್ಥದ ಸ್ಪೆಷಲ್‌ ಪ್ರೋಗ್ರಾಂ ಪ್ರಸಾರ ಮಾಡಿದ್ದು, ಇದಕ್ಕೂ ನೆಟ್ಟಿಗರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದು ಕಾಕತಾಳೀಯವಾಗಿರಬಹುದು. ಆದರೆ ನಿಜ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರೆ, ಮತ್ತೆ ಕೆಲವರು ಮೂಢನಂಬಿಕೆ ಬಿತ್ತುವ ವಾಹಿನಿ ಧೋರಣೆಯನ್ನು ಖಂಡಿಸಿದ್ದಾರೆ.

ಅಷ್ಟಕ್ಕೂ ಏನಿದು ಪ್ರೋಗ್ರಾಂ:

“ಕುರುಕ್ಷೇತ್ರ” ಸಿನಿಮಾದಲ್ಲಿ ಭೀಷ್ಮನ ಪಾತ್ರಧಾರಿಯಾಗಿದ್ದ ನಟ ಅಂಬರೀಶ್‌ ಶರಶಯ್ಯೆಯಲ್ಲಿ ಮಲಗಿ ಪ್ರಾಣ ಬಿಡುವ ದೃಶ್ಯವಿದೆ. ಆದರೆ ಸಿನಿಮಾ ಬಿಡುಗಡೆಗೂ ಮುನ್ನವೇ ಅಂಬರೀಷ್‌ ನಿಧನರಾದರು ಎಂದು ಹೇಳಲಾಗಿದೆ. ನಂತರ ಅಭಿಮನ್ಯುವಿನ ಪಾತ್ರಧಾರಿಯಾಗಿ ನಟಿಸಿದ್ದ ನಿಖಿಲ್‌ ಕುಮಾರಸ್ವಾಮಿ,  ಸಿನಿಮಾದಲ್ಲಿ ಚಕ್ರವ್ಯೂಹ ಬೇಧಿಸಲು ವಿಫಲವಾದಂತೆ, ಮಂಡ್ಯ ಹಾಗೂ ರಾಮನಗರ ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದನ್ನು ಉದಾಹರಿಸಲಾಗಿದೆ.

ಇದೇ ರೀತಿ ದುರ್ಯೋಧನ (ನಟ ದರ್ಶನ್‌ ) ಮಡದಿಯ ಪಾತ್ರಧಾರಿಯಾಗಿ ನಟಿಸಿದ್ದ ಮೇಘನಾ ರಾಜ್‌ , ನಿಜ ಜೀವನಲ್ಲಿ ಪ್ರೀತಿಸಿ ಮದುವೆಯಾದ ಪತಿ ಚಿರಂಜೀವಿ ಸರ್ಜಾ ರನ್ನು ಕಳೆದುಕೊಂಡರು ಎಂದು ವಿಶ್ಲೇಷಿಸಲಾಗಿದೆ.

ಎಲ್ಲಾದಕ್ಕಿಂತಲೂ ಪ್ರಮುಖವಾಗಿ ಸಿನಿಮಾದ ನಾಯಕ ನಟ ದರ್ಶನ್‌  ಹಾಗೂ ನಿರ್ಮಾಪಕ ಮುನಿರತ್ನ ಹಲವಾರಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ನಟ ದರ್ಶನ್ ಕೊಲೆ ಆರೋಪದ ಮೇಲೆ ಜೈಲಿಗೋದರೆ, ನಿರ್ಮಾಪಕ ಮುನಿರತ್ನ ಕೂಡ ಧಮ್ಕಿ, ಜಾತಿನಿಂಧನೆ ಹಾಗೂ ಅತ್ಯಾಚಾರದ ಆರೋಪಗಳನ್ನು ಎದುರಿಸುತ್ತಿದ್ದು ಜೈಲಿನಲ್ಲಿದ್ದಾರೆ ಎಂಬ ನಿರೂಪಣೆ ಕಾರ್ಯಕ್ರಮದಲ್ಲಿ ವ್ಯಕ್ತವಾಗಿದೆ.

ಟ್ರೋಲಿಗರು ಏನಂದ್ರು:

ವಾಹಿನಿಯ ಕಾರ್ಯಕ್ರಮವನ್ನು ಲೇವಡಿ ಮಾಡಿರುವ ನೆಟ್ಟಿಗರು ಹಾಗಾದ್ರೆ, “ ರಕ್ತ ಕಣ್ಣೀರು”  ಸಿನಿಮಾ ಮಾಡಿದ ನಟನಿಗೆ ಕುಷ್ಠ ರೋಗ ಬರಬೇಕಿತ್ತಲ್ವಾ ಎಂದು ಕಿಚಾಯಿಸಿದ್ದಾರೆ. ಅವರವರು ಮಾಡಿದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದಕ್ಕ್ಯಾಕೆ ಸಿನಿಮಾ ಕಾರಣ ಎಂದು ಎಳೆದು ತರುತ್ತೀರಿ ಎಂದು ಮತ್ತೆ ಕೆಲವರು ಕಿಡಿಕಾರಿದ್ದಾರೆ.

ಗಾಜಿನ ಮನೆ:

ನಟ ದರ್ಶನ್‌ ಪ್ರಕರಣದಲ್ಲಿ ಖಾಸಗಿ ವಾಹಿನಿಯೊಂದರ ನ್ಯೂಸ್‌ ಆಂಕ್ಯರ್‌ ಕುಡಿದು ಸಾರ್ವಜನಿಕ ಸ್ಥಳದಲ್ಲಿ ಕಾರನ್ನು ಹತ್ತಲು ಯತ್ನಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿತ್ತು. ಮಾತ್ರವಲ್ಲದೆ, ಚಾನಲ್‌ ನ ಆಂಕ್ಯರ್‌ ನ ಆನ್‌ ಸ್ಕ್ರೀನ್‌ ಹಾಗೂ ಆಫ್‌ ಸ್ಕ್ರೀನ್‌ ವರ್ತನೆ ಬಗೆಗೆ ತೀವ್ರ ಟೀಕೆಗಳು ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

key words: “Kurukshetra”, Kannada film, program, targeted, netizens’,trolls.!

SUMMARY:

Referring to the movie “Kurukshetra” starring actor Darshan, a special program was aired for the artists who acted in this movie, and this also received a response from the netizens. Some may call it a coincidence. But if they are of the opinion that it seems true, some others have condemned the channel’s attitude of sowing superstition.