ಬೆಂಗಳೂರು,ಸೆಪ್ಟಂಬರ್,27,2021(www.justkannada.in): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ 2019 ನೇ ಸಾಲಿನ ವಾರ್ಷಿಕ ದತ್ತಿನಿಧಿ ಪ್ರಶಸ್ತಿಯನ್ನ ಪ್ರಕಟಿಸಿದ್ದು, ಪ್ರಶಸ್ತಿಗೆ ಭಾಜನರಾದವರಿಗೆ ಅಕ್ಟೋಬರ್ 3 ರಂದು ಶಿವಮೊಗ್ಗದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಕರ್ನಾಟಕ ಕಾರ್ಯಕನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 2019ನೇ ಸಾಲಿನ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ವಿವರಗಳು ಇಂತಿದೆ.
ಡಿವಿಜಿ ಪ್ರಶಸ್ತಿ: ರವಿಹೆಗಡೆ, ಸಂಪಾದಕರು, ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್
ಎಚ್. ಎಸ್.ದೊರೆಸ್ವಾಮಿ ಪ್ರಶಸ್ತಿ: ಬಿ.ಎಂ ಹನೀಫ್ ಪ್ರಜಾವಾಣಿ
ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಸ್.ಎನ್.ಅಶೋಕಕುಮಾರ್, ಸಂಪಾದಕರು, ಗೊಮ್ಮಟವಾಣಿ
ಪಾಟೀಲ್ ಪುಟ್ಟಪ್ಪ ಪ್ರಶಸ್ತಿ : ಎಸ್.ಕೆ.ಶೇಷಚಂದ್ರಿಕ, ಹಿರಿಯ ಪತ್ರಕರ್ತರು
ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ಅ.ಚ.ಶಿವಣ್ಣ, ಹಿರಿಯ ಪತ್ರಕರ್ತರು
ಪಿ.ಆರ್.ರಾಮಯ್ಯಪ್ರಶಸ್ತಿ: ಯು.ಎಸ್.ಶೆಣೈ, ಸಂಪಾದಕರು, ಕುಂದಪ್ರಭ
ಗರುಡನಗಿರಿ ನಾಗರಾಜ್ ಪ್ರಶಸ್ತಿ: ಕೆ.ಆರ್.ಮಂಜುನಾಥ್, ಸಂಪಾದಕರು, ಮಲೆನಾಡ ಮಂದಾರ
ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ : ಕೋಡಿ ಹೊಸಳ್ಳಿ ರಾಮಣ್ಣ, ಹಿರಿಯ ಪತ್ರಕರ್ತರು
ಕಿಡಿ ಶೇಷಪ್ಪ ಪ್ರಶಸ್ತಿ: ಕೆ.ಎಂ.ರೇಖಾ, ಸಂಪಾದಕರು, ಹೊಸಪೇಟೆ ಟೈಮ್ಸ್
ಪಿ.ರಾಮಯ್ಯ ಪ್ರಶಸ್ತಿ: ರೇವಣ್ಣಸಿದ್ದಯ್ಯ ಮಹಾನುಭವಿಮಠ, ಸಂಪಾದಕರು, ಶಿಡ್ಲು ಪತ್ರಿಕೆ
ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ರಶ್ಮಿ, ಬ್ಯೂರೋ ಮುಖ್ಯಸ್ಥೆ ಪ್ರಜಾವಾಣಿ, ಹುಬ್ಬಳ್ಳಿ
ಎಂ. ನಾಗೇಂದ್ರರಾವ್ ಪ್ರಶಸ್ತಿ : ಶಾಂತಕುಮಾರ್ ಕೆ.ಎನ್.ಬ್ಯೂರೊ ಮುಖ್ಯಸ್ಥ, ವಿಜಯವಾಣಿ, ಶಿವಮೊಗ್ಗ
ಮಿಂಚು ಶ್ರೀನಿವಾಸ್ ಪ್ರಶಸ್ತಿ: ರಾಮಸ್ವಾಮಿ ಹುಲಕೋಡು, ವಿಜಯಕರ್ನಾಟಕ
ಹೆಚ್.ಎಸ್ರಂಗಸ್ವಾಮಿ ಪ್ರಶಸ್ತಿ : ಪಿ.ಸುನೀಲ್ಕುಮಾರ್ ಸಂಪಾದಕರು ‘ಸಿಟಿ ಹೈಲೈಟ್ಸ್’ ಬೆಂಗಳೂರು
ಸಂಘದ ವಿಶೇಷ ಪ್ರಶಸ್ತಿಗಳು:
ಪ್ರಹ್ಲಾದಗುಡಿ, ವರದಿಗಾರರು, ಕನ್ನಡ ಪ್ರಭ, ರಾಯಚೂರು,
ಮುನಿವೆಂಕಟೇಗೌಡ ಹಿರಿಯ ಪತ್ರಕರ್ತರು ಕೋಲಾರ
ಎಂ.ಕೆ ರಾಘವೇಂದ್ರ ಮೇಗರವಳ್ಳಿ. ‘ವಿಜಯಕರ್ನಾಟಕ’ ತೀರ್ಥಹಳ್ಳಿ
ಪ್ರಕಾಶ್ ರಾಮಜೋಗಿಹಳ್ಳಿ,ವಾರ್ತಾಭಾರತಿ ಬೆಂಗಳೂರು
ಅ.3 ರ ಭಾನುವಾರ ಸಂಜೆ 5 ಕ್ಕೆ ಶಿವಮೊಗ್ಗ ನಗರದ ಕಂಟ್ರಿ ಕ್ಲಬ್ ನ ಆವರಣದಲ್ಲಿ ಆಯೋಜನೆಗೊಂಡಿರುವ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಕಾರ್ಯಕನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಶಿವಮೊಗ್ಗ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ‘ಸಿಹಿಮೊಗೆ ಮಾಧ್ಯಮ’ ಹೆಸರಿನ ವಿಶೇಷ ಸ್ಮರಣ ಸಂಚಿಕೆಯನ್ನು ಸಂಸದರಾದ ಬಿ.ವೈ ರಾಘವೇಂದ್ರ ಅವರು ಬಿಡುಗಡೆ ಮಾಡಲಿದ್ದಾರೆ. ಶಿವಮೊಗ್ಗೆಯ ಪತ್ರಿಕಾ ಛಾಯಾಗ್ರಾಹಕರ ಸಹಭಾಗಿತ್ವದಲ್ಲಿ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಸಹ ಆಯೋಜಿಸಲಾಗಿದ್ದು, ವಿಧಾನಪರಿಷತ್ ಸದಸ್ಯ ಎಸ್ ರುದ್ರೇಗೌಡ ಅವರು ಉದ್ಘಾಟಿಸಲಿದ್ದಾರೆ. ಪ್ರಶಸ್ತಿಗಳನ್ನು ಜಿಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರದಾನ ಮಾಡಲಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಆಶಯನುಡಿಗಳನ್ನಾಡಲಿದ್ದು, ಶಿವಮೊಗ್ಗ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರೂ ಆದ ಕೆ. ವಿ. ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯಅತಿಥಿಗಳಾಗಿ, ಶಾಸಕರಾದ ಬಿ.ಕೆ.ಸಂಗಮೇಶ್ವರ, ಕೆ.ಬಿ. ಅಶೋಕ ನಾಯ್ಕ, ಕುಮಾರ್ ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ಕರ್ನಾಟಕ ಆರ್ಯವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ. ಎಸ್. ಅರುಣ್, ಮಹಾಪೌರರಾದ ಸುನೀತಾಅಣ್ಣಪ್ಪ, ಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಂಘದಅಧ್ಯಕ್ಷ ಸಿ.ಎಸ್. ಷಡಾಕ್ಷರಿ , ಜಾತ್ಯಾತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ಎಸ್. ಯಡಗೆರೆ ಪಾಲ್ಗೊಳ್ಳಲಿದ್ದಾರೆ.
Key words: KUWJ- Annual –Endowment- Award -Announcement –october.3
ENGLISH SUMMARY….
2019 KUWJ Annual Awards function on Oct. 3
Bengaluru, September 27, 2021 (www.justkannada.in): The Annual Endowment Awards given by the Karnataka Union of Working Journalists Association (KUWJ) for the year 2019 has been announced. The winners will be bestowed with the awards at a function to be held on October 3, at Shivamogga, according to KUWJ President Shivanand Tagaduru.
The award winners are as follows:
DVG Award: Ravi Hegde, Editor, Kannada Prabha and Suvarna News
H.S. Doreswamy Award: B.M. Haneef, Prajavani
Gommata Maadhyama Prashasti: S.N. Ashokkumar, Editor, Gummatavaani
Patil Puttappa Award: S.K. Sheshachandrika, Senior Journalist
S.V. Jayasheelarao Award: A. C. Shivanna, Senior Journalist
P.R. Ramaiah Award: U.S. Shenoy, Editor, Kundaprabha
Garudanagiri Nagaraj Award: K.R. Manjunath, Editor, Malnad Mandara
H.K. Veerannagowda Award: Kodi Hosahalli Ramanna, Senior Journalist
Kidi Sheshappa Award: K.M. Rekha, Editor, Hospete Times
P. Ramaiah Award: Revannasiddaiah Mahanubhavimata, Editor, Shidlu Patrike
Yashodamma G. Narayana Award: Rashmi, Bureau Incharge, Prajavani, Hubballi
M. Nagendrarao Award: Shanthakumar K.N., Bureau Incharge, Vijayavani, Shivamogga
Minchu Srinivas Award: Ramaswamy Hulakodu, Vijaya Karnataka
H. S. Rangaswamy Award: P. Sunil Kumar, Editor, ‘City Highlights,” Bengaluru
Special Awards:
Prahladagudi, Reporter, Kannada Prabha, Raichur
Muniveknategowda, Senior Journalist, Kolar
M.K. Raghavendra Megarahalli, ‘Vijaya Karnataka, Theerthalli
Prakash Ramajogihalli, Vartha Bharathi, Bengaluru
The award function will be held at 5.00 pm on October 3, Sunday, at the Country Club premises in Shivamogga.
Keywords: KUWJ/ award/ function/ October 3/ Shivamogga/ award winners