ಮೈಸೂರು,ಫೆಬ್ರವರಿ,14,2025 (www.justkannada.in): ಉದಯಗಿರಿ ಗಲಭೆಯಲ್ಲಿ ಆರ್ ಎಸ್ ಎಸ್ ನವರು ಇದ್ದಾರೆ ಎಂದು ಸಾಬೀತು ಪಡಿಸಲಿ. ನಾನೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಒಂದು ವೇಳೆ ಸಾಬೀತು ಆಗದಿದ್ದರೆ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ನಿವೃತ್ತಿಯಾಗಲಿ ಎಂದು ಮಾಜಿ ಶಾಸಕ ಹಾಗೂ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್ ನಾಗೇಂದ್ರ ಸವಾಲು ಹಾಕಿದರು.
ಉದಯಗಿರಿ ಪೊಲೀಸ್ ಠಾಣೆ ಕಲ್ಲು ತೂರಾಟದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರಿದ್ದರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾತನಾಡಿದ ಎಲ್.ನಾಗೇಂದ್ರ, ಆರೋಪಿ ಸುರೇಶ್ ಗೂ ಬಿಜೆಪಿಗೂ ಸಂಬಂಧವೇ ಇಲ್ಲ. ಆತ ನಮ್ಮ ಪಕ್ಷದ ಕಾರ್ಯಕರ್ತನೇ ಅಲ್ಲ ಎಂದು ಸ್ಪಷ್ಟಪಡಿಸಿದರು.
ಪೋಸ್ಟರ್ ಹಾಕಿದ್ದು ಸುರೇಶ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಹುಡುಗರು ಎನ್ನುತ್ತಿದ್ದಾರೆ. ಸುರೇಶ್ ಗೆ ಉರ್ದು ಗೊತ್ತಿಲ್ಲ. ತಪ್ಪು ಮಾಡಿದರೆ ಶಿಕ್ಷೆಯಾಗಬೇಕು. ಪಕ್ಷದ, ಆರ್ ಎಸ್ ಎಸ್ ಕಾರ್ಯಕ್ರಮಗಳಲ್ಲಿ ಯಾರ್ ಯಾರೋ ಫೋಟೋ ತೆಗೆಸಿಕೊಳ್ಳುತ್ತಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಎಲ್ ನಾಗೇಂದ್ರ ತಿಳಿಸಿದರು.
Key words: L. Nagendra, retire, politics, RSS, involvement , Udayagiri riots