ಬೆಂಗಳೂರು,ಜ,7,2020(www.justkannada.in): ಕೇಂದ್ರದ ಕಾರ್ಮಿಕ ನೀತಿಗೆ ವಿರೋಧ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ನಾಳೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಿವೆ.
ರಾಜ್ಯಕ್ಕೆ ಮುಷ್ಕರದ ಎಪೆಕ್ಟ್ ಅಷ್ಟಾಗಿ ತಟ್ಟಲ್ಲ ಎಂದು ಹೇಳಲಾಗುತ್ತಿದೆ. ನಾಳಿನ ಮುಷ್ಕರಕ್ಕೆ ಹೋಟೆಲ್ ಮಾಲೀಕರ ಸಂಘ, ಒಲಾ, ಊಬರ್ ಕ್ಯಾಬ್, ಆಟೋ ಟ್ಯಾಕ್ಸಿ ಚಾಲಕರ ಬೆಂಬಲವಿಲ್ಲ. ಹಾಗೂ ಕೆಎಸ್ ಆರ್ ಟಿಸಿಯಿಂದಲೂ ಬೆಂಬಲ ವ್ಯಕ್ತವಾಗಿಲ್ಲ. ಹೀಗಾಗಿ ನಾಳೆ ಬಸ್ ಗಳ ಸಂಚಾರ ಇರಲಿದ್ದು ಎಂದಿನಂತೆ ಶಾಲಾಕಾಲೇಜುಗಳು ತೆರೆಯಲಿವೆ. ಹಾಗೆಯೇ ಹೋಟೆಲ್ ಗಳು ಸಹ ಓಪನ್ ಆಗಲಿವೆ. ಇನ್ನು ಮೆಡಿಕಲ್ ಆಸ್ಪತ್ರೆ ಸೇವೆಗೆ ಯಾವುದೇ ಸಮಸ್ಯೆ ಇರುವುದಿಲ್ಲ.
ನಾಳಿನ ಮುಷ್ಕರಕ್ಕೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಎಲ್ ಐಸಿ ಕಚೇರಿ ಬಂದ್ ಆಗಲಿದ್ದು, ಎಸ್ ಬಿಐ ಬ್ಯಾಂಕ್ ಹೊರತುಪಡಿಸಿ ಉಳಿದ ಬ್ಯಾಂಕ್ ಗಳು ಓಪನ್ ಇರುವುದಿಲ್ಲ. ಇನ್ನು ಬೆಂಗಳೂರಿನಲ್ಲಿ ಮೆಟ್ರೋ ಸೌಲಭ್ಯ ಇರುತ್ತದೆ.
Key words: labor-strike –tomorrow-state