ಸಿಬ್ಬಂದಿ ಕೊರತೆ ನೆಪ ಹೇಳದೆ ಕೆಲಸಕ್ಕೆ ಮುಂದಾಗಿ– ಅಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಚಾಟಿ….

ಮಂಡ್ಯ ಫೆಬ್ರವರಿ 15,2021(www.justkannada.in):  ಸಿಬ್ಬಂದಿ ಕೊರತೆ ನೆಪ ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳಬೇಡಿ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡರು.jk

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆಯಲ್ಲಿ ಸಚಿವ ಪ್ರಭುಚೌಹಾಣ್,  ಪಶುಸಂಗೋಪನೆ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸಿಬ್ಬಂದಿ ಕೊರತೆ ಇರುವುದು ನನ್ನ ಗಮನಕ್ಕೆ ಇದೆ. ಇದ್ದ ಸಂಪನ್ಮೂಲದಲ್ಲೇ ಸದ್ಯ ಕಾರ್ಯನಿರ್ವಹಿಸುವ  ಸವಾಲು ನಮ್ಮ ಮುಂದಿದೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಪಶುಪಾಲನೆ ಮೇಲೆ ಬಹಳಷ್ಟು ಕುಟುಂಬಗಳು ಅವಲಂಬಿತವಾಗಿವೆ. ಪಶುಪಾಲಕರ ಬಹುದೊಡ್ಡ ಶಕ್ತಿಯೆಂದರೆ ಪಶುವೈದ್ಯರು ನೀವು ಮೂಕ ಪ್ರಾಣಿಗಳ ನೋವನ್ನು ಅರ್ಥಮಾಡಿಕೊಂಡು ಅವುಗಳ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಕೋಳಿ-ಕುರಿ ಮಾಂಸ ಉತ್ಪಾದನೆಗೆ ಹೆಚ್ಚು ಗಮನಹರಿಸಸಿ

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಾಗಿರುವುದರಿಂದ ಕೋಳಿ, ಕುರಿಗಳ ಮಾಂಸ ಉತ್ಪಾದನೆಗೆ ಜಿಲ್ಲಾ ಮಟ್ಟದಲ್ಲಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹೆಚ್ಚು ಗಮನಹರಿಸಿ ಎಂದು ಸಚಿವ ಪ್ರಭುಚೌಹಾಣ್ ಅಧಿಕಾರಿಗಳಿಗೆ ತಿಳಿಸಿದರು.

ಗೋಹತ್ಯೆ ನಿಷೇಧ ಹಿನ್ನೆಲೆಯಲ್ಲಿ ಗೋಮಾಳಗಳನ್ನು ಗುರುತಿಸಿ ಗೋಶಾಲೆಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಸಹಕರಿಸಬೇಕು. ಜಿಲ್ಲೆಯಲ್ಲಿ ಗಂಡು ಕರುಗಳನ್ನು ರೈತರು ಹಾಗೆ ಸಂತೆಗಳಲ್ಲಿ ಬಿಡುತ್ತಿರುವುದು ಗಮನಕ್ಕೆ ಬಂದಿದೆ. ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಸಮಾಲೋಚನೆ ನಡೆಸಿ ಕನಿಷ್ಠ ಮೂರು ತಿಂಗಳುಗಳ ವರೆಗೆ ಗಂಡು ಕರುಗಳನ್ನು ಸಾಕಿ ಗೋಶಾಲೆಗಳಿಗೆ ಬಿಡಲು ರೈತರಿಗೆ ಮನವಲಿಸಲು ಪ್ರಯತ್ನ ಮಾಡಿ ಎಂದು ಸಚಿವ ಪ್ರಭು ಚೌಹಾಣ್ ಹೇಳಿದರು.

lack-staff-work-without-pretending-minister-prabhu-chauhan-officer
ಕೃಪೆ-internet

ಆಸಕ್ತ ಸಂಘ-ಸಂಸ್ಥೆಗಳು ಗೋಶಾಲೆ ಆರಂಭಿಸಲು ಇಚ್ಛೆಯಿದ್ದರೆ ತಾಲೂಕು ಮಟ್ಟದ ಪಶುಸಂಗೋಪನೆ ಅಧಿಕಾರಿಗಳ ಮೂಲಕ ಆಯುಕ್ತಾಲಯಕ್ಕೆ ರಮನವಿ ಸಲ್ಲಿಸಿದರೆ ಎಲ್ಲ ಅಗತ್ಯ ನೆರವು ಇಲಾಖೆಯಿಂದ ನೀಡಲಾಗುವುದು ಎಂದು ಸಚಿವ ಪ್ರಭುಚೌಹಾಣ್ ಹೇಳಿದರು.

ಸಭೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಅಸ್ವತಿ, ಪೊಲೀಸ್ ಅಧೀಕ್ಷಕ ಕೆ ಪರಶುರಾಮ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಮಂಜುನಾಥ ಹಾಗೂ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Key words: Lack -staff – work –without- pretending-Minister -Prabhu Chauhan – officer