ಸಂವಿಧಾನ ಮತ್ತು ಬಿಜೆಪಿ : ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ..!

Constitution and BJP: What does Gokulashtami have to do with Imam Sahib?

ಮೈಸೂರು, ಮಾ.೨೫, ೨೦೨೫ : ಮೂಲ ಸಂವಿಧಾನವನ್ನ  ಬದಲಾವಣೆ ಮಾಡಲು ಯಾರಿಂದಲೂಸಾಧ್ಯವಿಲ್ಲ. ಮೀಸಲಾತಿ ಕೊಡುವ ಅಧಿಕಾರ ಇರುವುದು ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ. ಇಂತಹ ಸಾಮಾನ್ಯ ಪರಿಜ್ಞಾನ ಇಲ್ಲದೆ ಬಿಜೆಪಿಯವರು ಅಪಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಟೀಕಿಸಿದರು.

ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್  ಹೇಳಿದಿಷ್ಟು…

ದೇಶದಲ್ಲಿ 17 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಅಲ್ಲೆಲ್ಲಾ ಇಂತಹ ಘಟನೆ ನಡೆದರೂ ಬೆಳಕಿಗೆ ಬರೋದಿಲ್ಲ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಂತಹ ವಾತಾವರಣವನ್ನ ಬಿಜೆಪಿಯವರು ದುರುದ್ದೇಶದಿಂದಲೇ ಸೃಷ್ಟಿ ಮಾಡುತ್ತಾರೆ.

ಡಾ.ಅಂಬೇಡ್ಕರ್ ಸಂವಿಧಾನವನ್ನ ರಚನೆ ಮಾಡುವ ಸಂಧರ್ಭದಲ್ಲಿ ಜನ ಸಂಘ ವಿರೋಧ ಮಾಡಿತ್ತು 395 ಪರಿಚ್ಛೇದಗಳಿದ್ದವು ಈಗ 448 ಪರಿಚ್ಛೇದಗಳಿವೆ. ಇಲ್ಲಿವರಗೆ 104 ತಿದ್ದುಪಡಿಗಳಾಗಿವೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 70 ತಿದ್ದುಪಡಿ ಆಗಿವೆ. ಉಳಿದ ತಿದ್ದುಪಡಿ ಇತರೇ ಪಕ್ಷಗಳು ಅಧಿಕಾರದಲ್ಲಿದ್ದಾಗ ಆಗಿವೆ.

ರಾಜ್ಯದಲ್ಲಿ  ಸಿವಿಲ್ ಕಾಮಗಾರಿಗಳಲ್ಲಿ ಕೊಡುವ ಮೀಸಲಾತಿ ಸಂವಿಧಾನದ ಅಡಿಯಲ್ಲೇ ಬರೋದಿಲ್ಲ ಒಟ್ಟು 43% ಅಷ್ಟು ಮೀಸಲಾತಿ ಕೊಟ್ಟಿದ್ದಾರೆ. ಅದರಲ್ಲಿ 4% ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರೆ. 400 ಸೀಟನ್ನ ಗೆಲ್ಲಿಸಿದ್ರೆ ದೇಶದ ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎಂದಿದ್ದವರು ಬಿಜೆಪಿಯವರು. ಅನಂತ್ ಕುಮಾರ್, ಅಮಿತ್ ಶಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಹೇಳಿದ್ರು.

ಬಿಜೆಪಿಗು ಸಂವಿಧಾನಕ್ಕೂ ಏನು ಸಂಬಂಧ.

ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎನ್ನುವಂತಾಗಿದೆ. ಪಾರ್ಲಿಮೆಂಟ್ ನಲ್ಲಿ ಅಂಬೇಡ್ಕರ್ ಸೋಲಿಸಿದ್ದು ಯಾರು ಎಂದು ಬಿಜೆಪಿ ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಅಂಬೇಡ್ಕರ್ ನನ್ನ ಸೋಲಿಗೆ ಜನಸಂಘ,ಸಾವರ್ಕರ್ ಎಂದು ಪತ್ರವನ್ನೇ ಬರೆದಿದ್ದಾರೆ. ಅಂಬೇಡ್ಕರ್ ಬರೆದ ಪತ್ರ ಪ್ರದರ್ಶಿಸಿದ ಲಕ್ಷ್ಮಣ್.

ನೀವು ಅಂಬೇಡ್ಕರ್ ಬಗ್ಗೆ,ಸಂವಿಧಾನದ ಬಗ್ಗೆ ಮಾತಾಡುತ್ತೀರಾ.?

ಸಣ್ಣ ವಿಚಾರವನ್ನು ಇಟ್ಟುಕೊಂಡು ಸುಳ್ಳು ಆರೋಪ ಮಾಡುತ್ತ ಸರ್ಕಾರದ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ, ಬಿಜೆಪಿ ನಾಯಕರ ವಿರುದ್ಧ ಲಕ್ಷ್ಮಣ್ ವಾಗ್ದಾಳಿ.

key words: Constitution and BJP, congress, Mysore, Lakshman, KPCC

summary: 

Constitution and BJP: What does Gokulashtami have to do with Imam Sahib?