ಮೈಸೂರು, ಜ.೦೪,೨೦೨೫: ಜೆಡಿಎಸ್ ನ 9 ಜನ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲು ನಮ್ಮ ಬಳಿ ಮಾತನಾಡಿದ್ದಾರೆ. ಫೆಬ್ರವರಿ ವೇಳೆಗೆ ಇವರೆಲ್ಲಾ ಕಾಂಗ್ರೆಸ್ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೊಸ ಬಾಂಬ್.
ಸುದ್ಧಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಎಂ.ಲಕ್ಷ್ಮಣ್ ಹೇಳಿದಿಷ್ಟು…
ಮೈಸೂರು, ಮಂಡ್ಯ, ಚಾ.ನಗರ, ಹಾಸನ ಭಾಗದ 5 ಶಾಸಕರು ಈಗಾಗಲೇ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಅವರೇ ಖುದ್ದು ಪಕ್ಷದ ಹೈಕಮಾಂಡ್ ಭೇಟಿ ಮಾಡಿದ್ದಾರೆ. ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿಯಾಗಿರುವ ಹಿನ್ನೆಲೆ ಇವರೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಬರಲು ಸಿದ್ದವಾಗಿದ್ದಾರೆ. ಕಂಡಿಷನ್ ಹಾಕಿ ಬರುವುದಾದರೆ ಬೇಡ ಅಂದಿದ್ದೇವೆ. ಬಹುತೇಲ ಫೆಬ್ರವರಿಯಲ್ಲಿ ಹೈಕಮಾಂಡ್ ಈ ಬಗ್ಗೆ ಅಂತಿಮ ನಿರ್ಧಾರ ಮಾಡಲಿದೆ. ಭದ್ರವಾಗಿದ್ದೇವೆ ಅಂತಾ ಹೇಳಿಕೆ ನೀಡಿದವರು ಸೇರಿದಂತೆ ಹಲವರು ಬರುತ್ತಾರೆ. ನಮಗೆ ಅವರ ಅವಶ್ಯಕತೆ ಇಲ್ಲ. ಆದರೆ ಅವರೇ ಈಗ ದುಂಬಾಲು ಬಿದ್ದಿರುವುದರಿಂದ ಪರಿಗಣಿಸುತ್ತೇವೆ . ಕೆಪಿಸಿಸಿ ವಕ್ತಾರ ಎಂ ಲಕ್ಣ್ಮಣ್ ಹೊಸ ಬಾಂಬ್.
ಸ್ವಾಗತ:
ಕೇಂದ್ರ ಸಚಿವ ಹಾಗೂ ಮಂಡ್ಯ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಮೈಸೂರಲ್ಲಿ “ ದಿಶಾ “ ಮೀಟಿಂಗ್ ನಡೆಸುತ್ತಿರುವುದನ್ನು ಎಂ ಲಕ್ಣ್ಮಣ್ ಸ್ವಾಗತಿಸಿದರು.
key words: Nine JD(S) MLA, join Congress, by February, Lakshmanan.M
SUMMARY:
“Nine JD(S) MLAs have spoken to us to join the Congress. It is almost certain that all of them will join the Congress by February,” Congress spokesperson M Lakshmanan said.