ಮೈಸೂರು, ಮೇ,22, 2024: (www.justkannada.in news) ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಸಿಗಲು ʼ ಲಕ್ಷ್ಮಿ ಕಟಾಕ್ಷ ʼ ವೇ ಕಾರಣ. ಆದರೆ ಇದು ಸರಸ್ವತಿ ಕ್ಷೇತ್ರ, ಇಲ್ಲಿ ಲಕ್ಷ್ಮಿ ಆಟ ನಡೆಯೋದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಎಚ್.ಎ.ವೆಂಕಟೇಶ್ ವ್ಯಂಗ್ಯವಾಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದಿಷ್ಟು..
ಮೇಲ್ಮನೆಗೆ ಚುನಾವಣೆ ನಡೆಯುತ್ತಿದೆ. ಇಲ್ಲಿ ಬುದ್ಧಿವಂತರು, ವಾಗ್ಮಿಗಳು ಪ್ರವೇಶ ಪಡೆಯುವ ಸ್ಥಳ. ಆದರೆ, ಜೆಡಿಎಸ್ ಲಕ್ಷ್ಮಿಕಟಾಕ್ಷದಿಂದ ಯಾವ ಅರ್ಹತೆಯೂ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡಿದೆ. ಆದರೆ ಶಿಕ್ಷಕರನ್ನು ಪ್ರತಿನಿಧಿಸುವ ಈ ಸರಸ್ವತಿ ಕ್ಷೇತ್ರದಲ್ಲಿ ಲಕ್ಷ್ಮಿ ಆಟ ನಡೆಯಲ್ಲ ಎಂದರು.
ಒಂದು ವೇಳೆ ಮರಿತಿಬ್ಬೇಗೌಡ ಅವರು ಜಡಿಎಸ್ ನಲ್ಲೇ ಇದ್ದಿದ್ದರೆ ಅವರಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗುತ್ತಿರಲಿಲ್ಲ. ಜೆಡಿಎಸ್ ನಲ್ಲಿ ನಡೆಯುತ್ತಿರುವ ʼಲಕ್ಷ್ಮಿ ʼ ಪ್ರಭಾವ ಅರಿತ ಮರಿತಿಬ್ಬೇಗೌಡ, ಕಾಂಗ್ರೆಸ್ ಮುಖಂಡರ ಜತೆ ಸಮಾಲೋಚನೆ ನಡೆಸಿ ಜೆಡಿಎಸ್ ತೊರೆದು ಈ ಹಿಂದೆಯೇ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಕಾಂಗ್ರೆಸ್ ನವರು ಜಿಲ್ಲೆಯಲ್ಲಿ ಅಧಿಕಾರಗಳನ್ನು, ಶಿಕ್ಷಕರನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇದು ಸತ್ಯಕ್ಕೂ ದೂರವಾದದ್ದು. ಒರ್ವ ಜವಾಬ್ದಾರಿ ಸ್ಥಾನದಲ್ಲಿರುವ ಹಿರಿಯ ರಾಜಕಾರಣಿ ಇಂಥ ಸುಳ್ಳು ಹೇಳಬಾರದು. ಜನರಿಗೆ ಗೊತ್ತಿದೆ ಯಾರ ಸಂಸ್ಕೃತಿ ಎಂಥದ್ದು ಎಂಬುದು. ಜೆಡಿಎಸ್ ಟಿಕೆಟ್ ವಂಚಿತ, ಕೆ.ಟಿ.ಶ್ರೀಕಂಠೇಗೌಡ ಅವರು ಬೆಂಬಲಿಗರ ಸಭೆ ನಡೆಸುವಾಗ ಸಭೆಗೆ ನುಗ್ಗಿ ಅಡ್ಡಿ ಪಡಿಸಿದ್ದು ಯಾರು, ಅವರನ್ನು ಎಳೆದಾಡಿ ಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ್ದು ಯಾರು..? ಇದೇ ಜೆಡಿಎಸ್ ಕಾರ್ಯಕರ್ತರಲ್ಲವೆ, ಇದೇ ತಾನೆ ನಿಮ್ಮ ಗೂಂಡಾ ಸಂಸ್ಕೃತಿ ಎಂದು ಟೀಕಿಸಿದರು.
ಬಿಜೆಪಿ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಡಾ.ಅಶ್ವಥ್ ನಾರಾಯಣ, ಇಡೀ ಶಿಕ್ಷಣ ಕ್ಷೇತ್ರವನ್ನೇ ಕಲುಷಿತಗೊಳಿಸಿದರು. ಇಲಾಖೆ ಭ್ರಷ್ಟಚಾರದಲ್ಲಿ ಮುಳುಗಿತ್ತು, ಇವರ ಅವಧಿಯಲ್ಲಿ ಒಂದೇ ಒಂದು ನೇಮಕಾತಿ ನಡೆಯಲಿಲ್ಲ. ಸಿಂಡಿಕೇಟ್ ಸದಸ್ಯರನ್ನಾಗಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂದ ಪಡದವರನ್ನು ನೇಮಕಗೊಳಿಸಿ ಹಾಳುಗೆಡವಿದ್ರು ಎಂದು ವೆಂಕಟೇಶ್ ಹರಿಹಾಯ್ದರು.
ಎನ್.ಡಿ.ಎ ಅಭ್ಯರ್ಥಿ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ದಿವಂಗತ ಗೋವಿಂದೇಗೌಡ ಅವರ ಹೆಸರು ಪ್ರಸ್ತಾಪಿಸಲಾಗಿದೆ, ಆದರೆ ಇವರ್ಯಾರಿಗೂ ಗೋವಿಂದೇಗೌಡರ ಹೆಸರು ಹೇಳುವ ಯೋಗ್ಯತೆ ಇಲ್ಲ. ಅಂಥ ಶ್ರೇಷ್ಠ ವ್ಯಕ್ತಿ ಗೋವಿಂದೇಗೌಡರು ಎಂದರು.
key words: This is Saraswati constituency, lakshmi game will not take place here, Congress spokesperson, Venkatesh
summary:
Elections to the Upper House are underway. It is a place where wise people, orators get entry. However, the JD(S) has given a ticket to a person who has no qualifications from. But lakshmi’s game will not take place in this Saraswati constituency, which represents teachers,” he said
Dr Ashwath Narayan, who was the education minister in the BJP government, polluted the entire education sector. The department was steeped in corruption and not a single appointment took place during his tenure. Venkatesh alleged that the syndicate members were ruined by appointing people who were not related to the education sector.