ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಬೆನ್ನುಮೂಳೆ ಮುರಿತ :  ಎಲ್1 ಎಲ್4 ಹಾಗೂ ಸಿ4, ಸಿ5 ಗೆ ಪೆಟ್ಟು..!

Minister Lakshmi Hebbalkar suffers spinal fracture, injuries to L1 L4, C4, C5. Minister Lakshmi Hebbalkar has been admitted to Vijaya Hospital in Belagavi with two bones of her back (L1 & L4) slightly fractured. She also suffered injuries on her neck (C4, C5), the doctors said.

 

ಬೆಳಗಾವಿ, Jan15,2025:  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಬೆಳಗಾವಿಯ ವಿಜಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಅವರ ಬೆನ್ನಿನ ಎರಡು ಮೂಳೆಗಳು (ಎಲ್1 ಎಲ್4) ಅಲ್ಪಪ್ರಮಾಣದಲ್ಲಿ ಮುರಿದಿವೆ. ಜತೆಗೆ ಕುತ್ತಿಗೆ ಭಾಗದಲ್ಲಿ (ಸಿ4, ಸಿ5) ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಮಂಗಳವಾರ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌  ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಸಚಿವೆ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಮುಖ, ಹಣೆ, ಕಿವಿ, ಭುಜಕ್ಕೆ ಗಾಯಗಳಾಗಿದ್ದು. ಕಾರಿನ ಚಾಲಕ ಮತ್ತು ಗನ್‌ಮ್ಯಾನ್‌ಗೂ ಸಣ್ಣಪುಟ್ಟ ಗಾಯಗಳಾಗಿವೆ.

‘ ಸಚಿವೆ ಲಕ್ಷ್ಮೀ  ಹೆಬ್ಬಾಳ್ಕರ್‌ ಅವರಿಗೆ ಸದ್ಯ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ನಾಲ್ಕು ದಿನ ಆಸ್ಪತ್ರೆ ಯಲ್ಲಿದ್ದು ಮನೆಗೆ ಹಿಂದಿರುಗುವರು. ಬಳಿಕ ಒಂದು ತಿಂಗಳು ಅವರು ವಿಶ್ರಾಂತಿ ಪಡೆಯಬೇಕು ಎಂದು ಅವರಿಗೆ ಚಿಕಿತ್ಸೆ ನೀಡಿದ ಡಾ.ರವಿ ಪಾಟೀಲ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:  

ಮಂಗಳವಾರ ‘ರಾತ್ರಿ 11ರ ಸುಮಾರಿಗೆ ಬೆಂಗಳೂರಿನಿಂದ ಸಚಿವೆ ಮತ್ತು ಇತರರು ಕಾರಿನಲ್ಲಿ ಹೊರಟರು. ಅಂಬಡಗಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ, ಅಡ್ಡ ಬಂದ ನಾಯಿಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಕಾರನ್ನು ಎಡಕ್ಕೆ ತಿರುಗಿಸಿದ.  ಅದೇವೇಳೆಗೆ ಮುಂದೆ ದೊಡ್ಡ ಕ್ಯಾಂಟ‌ರ್ ವಾಹನ ನಿಧಾನವಾಗಿ ಚಲಿಸುತ್ತಿತ್ತು. ಇದನ್ನು ತಪ್ಪಿಸಲು ಚಾಲಕ ಕಾರನ್ನು ಸರ್ವಿಸ್ ರಸ್ತೆಗೆ ಇಳಿಸಿದ. ಆಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆಯಿತು ಎಂದು ಮೂಲಗಳು ತಿಳಿಸಿವೆ.

‘ಏರ್‌ಬ್ಯಾಗ್‌ಗಳು ತೆರೆದುಕೊಂಡಿ ದ್ದರಿಂದ ಯಾರಿಗೂ ಹೆಚ್ಚಿನ ಅಪಾಯ ಸಂಭವಿಸಲಿಲ್ಲ. ಅಲ್ಲದೇ, ‘ಸಚಿವೆ ಸೀಟ್‌ ಬೆಲ್ಟ್ ಹಾಕಿದ್ದರಿಂದ ಹೆಚ್ಚು ಪೆಟ್ಟು ಬಿದ್ದಿಲ್ಲ.

key words: Minister, Lakshmi  Hebbalkar, suffers, spinal fracture, injuries , L1 L4, C4, C5

SUMMARY:

Minister Lakshmi Hebbalkar suffers spinal fracture, injuries to L1 L4, C4, C5. Minister Lakshmi Hebbalkar has been admitted to Vijaya Hospital in Belagavi with two bones of her back (L1 & L4) slightly fractured. She also suffered injuries on her neck (C4, C5), the doctors said.