ಬೆಳಗಾವಿ, ಮಾರ್ಚ್ 28, 2024 (www.justkannada.in): ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆಗಿಳಿಯುತ್ತಿದ್ದು ಈ ನಡುವೆ ಶೆಟ್ಟರ್ ವಿರುದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ನನ್ನ ಕರ್ಮಭೂಮಿ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ಕುರಿತು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹುಬ್ಬಳ್ಳಿ-ಧಾರವಾಡದ ಜನ ಹೊರ ಹಾಕಿದ್ದಾರೆ. ಹೊರಗೆ ಹಾಕಿಸಿಕೊಂಡು ಇಲ್ಲಿ ಬಂದು ಮಾತನಾಡುತ್ತಿದ್ದಾರೆ. ಇದು ನನ್ನ ಕರ್ಮ ಭೂಮಿ ಅಂದ್ರೆ ಸುಮ್ಮನಿರಬೇಕಾ? ಹುಬ್ಬಳ್ಳಿಗೆ ನನ್ನ ಕರ್ಮಭೂಮಿ ಅಂದ್ರೆ ಆ ಜನ ಒಪ್ತಾರಾ? ನಾವೇನು ಹುಚ್ಚರಿದ್ದೇವಾ..? ಎಂದು ಕಿಡಿಕಾರಿದರು.
, ಬೆಳಗಾವಿ ಜಿಲ್ಲೆಯ ಜನರನ್ನ ಬಕ್ರಾ ಮಾಡಲು ಬಂದಿದ್ದಾರಾ. ಬೆಳಗಾವಿ ಜಿಲ್ಲೆಗೆ ಜಗದೀಶ್ ಶೆಟ್ಟರ್ ಕೊಡುಗೆ ಏನು? ನಾಚಿಕೆ ಆಗಬೇಕು. ಬಿಜೆಪಿಯಿಂದ ಶೆಟ್ಟರ್ ಆರು ಬಾರಿ ಆರಿಸಿ ಬಂದಿದ್ದಾರೆ. ಸಿಎಂ, ಮಂತ್ರಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಜಿಲ್ಲೆ ಮತ್ತು ಕಾರ್ಯಕರ್ತರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಅವರ ಕಾರ್ಯಕರ್ತರೇ ಗೋಬ್ಯಾಕ್ ಎಂದು ಹೇಳುತ್ತಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಲೇವಡಿ ಮಾಡಿದರು.
ಇನ್ನು ಚುನಾವಣೆಗಾಗಿ ಕಾಂಗ್ರೆಸ್ ಕೇಸರಿ ಶಾಲಿನ ಮೊರೆ ಹೋಗಿದೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಟಾಂಗ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್, ಇವೆಲ್ಲಾ ಚುನಾವಣೆ ವಿಚಾರಗಳೇ ಅಲ್ಲ. ಸಂಸದರು ಯಾರು, ಅವರ ಜವಾಬ್ದಾರಿ ಏನು ಜನ ತೀರ್ಮಾನಿಸುತ್ತಾರೆ. ಒಂದೇ ವರ್ಷದಲ್ಲಿ ಒಂದು ಸಾವಿರ ಕೋಟಿ ಅನುದಾನ ತಂದಿದ್ದೇನೆ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.
Key words: Lakshmi Hebbalkar, Jagdish Shettar, Belagavi